Advertisement

ಪಾಕಿಸ್ಥಾನ ಸೂಪರ್ ಲೀಗ್ ಸಂಕಷ್ಟದಲ್ಲಿದೆ: ಶೋಯೆಬ್ ಅಖ್ತರ್

11:15 AM Jun 03, 2020 | keerthan |

ಇಸ್ಲಮಾಬಾದ್: ಭಾರತದ ಐಪಿಎಲ್ ನಂತೆ ಪಾಕಿಸ್ಥಾನದಲ್ಲಿ ನಡೆಯುವ ಪಾಕಿಸ್ಥಾನ ಸೂಪರ್ ಲೀಗ್ ( ಪಿಎಸ್ ಎಲ್) ಸಂಕಷ್ಟದಲ್ಲಿದೆ. ಮುಂದಿನ ವರ್ಷ ಪಿಎಸ್ ಎಲ್ ಕೂಟ ನಡೆಯೂವುದು ಕೂಡಾ ಅನುಮಾನ ಎಂದಿದ್ದಾರೆ ಮಾಜಿ ವೇಗಿ ಶೋಯೆಬ್ ಅಖ್ತರ್.

Advertisement

ಟಿವಿ ಮಾಧ್ಯಮವೊಂದರ ಜೊತೆ ಮಾಡಿದ ರಾವಲ್ಪಿಂಡಿ ಎಕ್ಸ್ ಪ್ರೆಕ್ಸ್ ಅಖ್ತರ್, ಪಿಎಸ್ ಎಲ್ ಕೂಟ ಭಾರಿ ಆರ್ಥಿಕ ಸಂಕಷ್ಟದಲ್ಲಿದೆ. ಕೆಲವು ತಂಡದ ಮಾಲೀಕರು ತಂಡವನ್ನು ಮಾರಲು ಯತ್ನಿಸುತ್ತಿದ್ದಾರೆ. ಮುಂದಿನ 16ರಿಂದ 18 ತಿಂಗಳು ಪಿಎಸ್ ಎಲ್ ಕೂಟ ನಡೆಯುವುದು ಅನುಮಾನ ಎಂದಿದ್ದಾರೆ.

ಮುಂದಿನ ಸಪ್ಟೆಂಬರ್ ನ ವರೆಗೆ ಕ್ರಿಕೆಟ್ ನಡೆಯದೇ ಇದ್ದರೆ, ನಂತರದ ನಾಲ್ಕು ತಿಂಗಳಲ್ಲಿ ಪಿಎಸ್ ಎಲ್ ನಡೆಸುವುದು ಕಷ್ಟ. ಕೆಲವು ಫ್ರಾಂಚೈಸಿಗಳು ಈಗಾಗಲೇ ತಮ್ಮ ಬ್ರಾಂಡ್ ಗಳನ್ನು ಮಾರಲು ಯೋಚಿಸುತ್ತಿವೆ ಎಂದು ಅಖ್ತರ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಉತ್ತಮ ಬ್ರಾಂಡ್ ಗಳು ಬರಲಿದೆ. ಇನ್ನೂ ಉತ್ತ,ಮ ರೀತಿಯಲ್ಲಿ ಪಿಎಸ್ ಎಲ್ ಎದ್ದು ನಿಲ್ಲಲಿದೆ ಎಂದು ಮಾಜಿ ವೇಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next