Advertisement
ಮೊಬೈಲ್ನಲ್ಲಿ ಇರುವ ಸಾಕ್ಷ್ಯಗಳನ್ನು ಅಮೃತ್ ಪೌಲ್ ನಾಶಪಡಿಸಿದ್ದಾರೆ. ಹೀಗಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಇರುವ ದಾಖಲೆಗಳನ್ನು ರಿಟ್ರೀವ್ ಮಾಡಿದ ಬಳಿಕ ಅವರು ಯಾರೊಂದಿಗೆಲ್ಲ ವ್ಯವಹಾರ ನಡೆಸುತ್ತಿದ್ದರು ಎಂಬಿತ್ಯಾದಿ ಸಾಕ್ಷ್ಯಗಳು ಲಭ್ಯವಾಗಲಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಅಮೃತ್ ಪೌಲ್ ಅವರನ್ನು ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶೇಖರ್ ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಅಮೃತ್ ಪೌಲ್ ತಾನೊಬ್ಬ ಎಡಿಜಿಪಿ ಶ್ರೇಣಿ ಅಧಿಕಾರಿಯಾಗಿರುವುದರಿಂದ ನಿನ್ನಿಂದ ವಿಚಾರಣೆಗೆ ಒಳಪಡುವುದಿಲ್ಲ ಎಂದು ವರಸೆ ತೆಗೆದಿದ್ದರು. ಬಳಿಕ ಎಡಿಜಿಪಿ ಉಮೇಶ್ ಕುಮಾರ್ ಅವರೇ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
Related Articles
ವಿಚಾರಣೆ ಸಂದರ್ಭ ಪೌಲ್, ಸ್ಟ್ರಾಂಗ್ ರೂಮ್ ಕೀಲಿಕೈ ಶಾಂತ ಕುಮಾರ್ಗೆಕೊಟ್ಟದ್ದು ನಿಜ. ಆತ ಒಎಂಆರ್ ಶೀಟ್ ಪರಿಶೀಲನೆಯ ನೆಪದಲ್ಲಿ ಕೀಲಿಕೈ ಪಡೆದಿದ್ದ. ಆದರೆ ಆತ ಅಕ್ರಮ ನಡೆಸುತ್ತಾನೆ ಎನ್ನುವುದು ಗೊತ್ತಿರಲಿಲ್ಲ ಎಂದು ಶಾಂತಕುಮಾರ್ ವಿರುದ್ಧವೇ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಮಂಜುನಾಥ್ ಮನೆ ಶೋಧಮಂಗಳವಾರ ಸೆರೆಯಾಗಿರುವ ಐಎಎಸ್ ಅಧಿಕಾರಿ ಜೆ. ಮಂಜುನಾಥ್ಗೆ ಸೇರಿದ ಫ್ಲ್ಯಾಟ್ನಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಯಶವಂತಪುರದ ಸಲಾರ್ ಪುರಿಯಾ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಲ್ಲಿ ಸುಮಾರು ಐದೂವರೆ ತಾಸುಗಳ ಕಾಲ ಶೋಧಿಸಲಾಗಿದೆ. ಈ ವೇಳೆ ಕೆಲವು ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಡಿವೈಎಸ್ಪಿ ನೇತೃತ್ವದಲ್ಲಿ 8 ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಲಂಚಕ್ಕೆ ಸಂಬಂಧಿಸಿ ದಾಖಲೆ ಅಥವಾ ಸಾಕ್ಷ್ಯ ಇದೆಯೇ ಎಂದು ಶೋಧಿಸಲಾಗಿದೆ ಎಂಬುದಾಗಿ ಎಸಿಬಿ ಮೂಲಗಳು ತಿಳಿಸಿವೆ.