Advertisement

ಕೋರ್ಟ್‌ ಆದೇಶ ಬಳಿಕ ಪಿಎಸ್‌ಐ ಮರು ಪರೀಕ್ಷೆ

11:36 PM Apr 06, 2023 | Team Udayavani |

ಹುಬ್ಬಳ್ಳಿ: ನ್ಯಾಯಾಲಯದ ಆದೇಶದ ಬಳಿಕವೇ ಪಿಎಸ್‌ಐ ಮರು ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್‌ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್‌ಐ ಮರು ಪರೀಕ್ಷೆ ನಡೆಸಲು ಈಗಾಗಲೇ ಆದೇಶಿಸಿದ್ದೇವೆ. ಕೆಲವು ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅಂತಿಮ ಆದೇಶಕ್ಕೆ ಇಲಾಖೆ ಬದ್ಧವಾಗಿದೆ. ಮರು ಪರೀಕ್ಷೆಗೆ ಅನುಮತಿ ಲಭಿಸಿದ ಅನಂತರ ಪರೀಕ್ಷೆ ನಡೆಸಲಾಗುವುದು ಎಂದರು.

Advertisement

ಪೊಲೀಸ್‌ ಇಲಾಖೆ ಯಾವುದೇ ನೇಮಕಾತಿ ಪರೀಕ್ಷೆಗಳಿರಲಿ, ಅದರಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಇದರ ಹಿಂದೆಯೂ ಒಬ್ಬ ವ್ಯಕ್ತಿ ಇರುತ್ತಾನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಆತ ಹೊಂದಾಣಿಕೆ ಮಾಡಿಕೊಂಡರೆ ಎಷ್ಟೇ ತಂತ್ರಜ್ಞಾನ ಬಳಸಿದರೂ ಅದು ಉಪಯೋಗಕ್ಕೆ ಬಾರದು. ಮೇಲಧಿಕಾರಿಗಳು ಸೇರಿ ಯಾರ್ಯಾರು ಇದರಲ್ಲಿ ರಾಜಿಯಾಗಿದ್ದಾರೋ ಅವರೆಲ್ಲ ಇಂದು ಜೈಲಿನಲ್ಲಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next