Advertisement
ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕರು ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಶ್ರೀನಿವಾಸ್, ಕೋವಿಡ್ ಪರಿಣಾಮ ದ್ರಾಕ್ಷಿ ಬೆಳೆಗಾರರಿಗೆ ಹಾಕಿದ ಬಂಡವಾಳ ಸಹ ಕೈ ಸೇರದೆ ನಷ್ಟಕ್ಕೆ ಗುರಿಯಾಗಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಪರಿಹಾರ ಒದಗಿಸಿ ಕೊಡಬೇಕೆಂದರು. ರೈತರಿಗೆ ಕೆ.ಜಿ.ದ್ರಾಕ್ಷಿಗೆ 10, 15 ರೂ. ಸಿಗುತ್ತಿದೆ. ಇದ ರಿಂದ ತೀವ್ರ ಆರ್ಥಿಕ ನಷ್ಟಕ್ಕೆ ಗುರಿಯಾಗಬೇಕಿದೆ. ಜಿಲ್ಲೆ ಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರೈತರು ದ್ರಾಕ್ಷಿ, ಹಣ್ಣು ತರಕಾರಿ ಬೆಳೆಯುತ್ತಿದ್ದು, ಸರ್ಕಾರಕೇವಲ ಹೂವು ಬೆಳೆಗಾರರಿಗೆ ಮಾತ್ರ ಪರಿಹಾರ ಘೋಷಿಸಿ ದ್ರಾಕ್ಷಿ ಹಾಗೂ ಹಣ್ಣು ಮಾರಾಟಗಾರರನ್ನು ಕಡೆಗಣಿಸಿದೆ ಎಂದು ಶ್ರೀನಿವಾಸ್ ಸಿದ್ದರಾಮಯ್ಯರ ಗಮನಕ್ಕೆ ತಂದಿ ದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರು ಇದ್ದರು.