ಬೆಂಗಳೂರು: ನಗರದಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ಕೋವಿಡ್-19 ಆಸ್ಪತ್ರೆಗಳೆಷ್ಟು? ಮತ್ತು ಅಲ್ಲಿರುವ ಒಟ್ಟು ಹಾಸಿಗೆಗಳ ಸಂಖ್ಯೆ ಎಷ್ಟು ಸೇರಿದಂತೆ ಸೋಂಕಿತರ ನಿರ್ವಹಣೆ, ಆರೈಕೆ ಮತ್ತು ಚಿಕಿತ್ಸೆಯ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಗರದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಸೋಂಕಿತರು ಸಾವನ್ನಪ್ಪಿದ್ದಾರೆ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿದೆ ಎಂದು ತಿಳಿಸಿ ವಕೀಲೆ ಗೀತಾ ಮಿಶ್ರಾ, ಭಾರತ್ ಪುನರುತ್ಥಾನ ಟ್ರಸ್ಟ್ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮತ್ತು ಹೈಕೋರ್ಟ್ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ನಗರದಲ್ಲಿ ನಿಗದಿತ ಸರ್ಕಾರಿ ಹಾಗೂ ಖಾಸಗಿ ಕೋವಿಡ್-19 ಆಸ್ಪತ್ರೆಗಳೆಷ್ಟು? ಅಲ್ಲಿರುವ ಒಟ್ಟು ಹಾಸಿಗೆಗಳ ಸಂಖ್ಯೆ ಎಷ್ಟು? ಅದರಲ್ಲಿ ವೆಂಟಿಲೇಟರ್ ಸಹಿತ ಮತ್ತು ವೆಂಟೆಲೇಟರ್ ರಹಿತ ಹಾಸಿಗೆಗಳ ಸಂಖ್ಯೆ ಎಷ್ಟು? ಆಯಾ ದಿನ ಯಾವ ಆಸ್ಪತ್ರೆಯಲ್ಲಿ, ಯಾವ ಬಗೆಯ ಹಾಸಿಗೆಗಳು ಲಭ್ಯವಿರುತ್ತವೆ? ಅವುಗಳನ್ನು ಪಡೆದುಕೊಳ್ಳಲು ಯಾವ ವಿಧಾನ ಅನುಸರಿಸಬೇಕು?
ಸೋಂಕಿತರು ತಕ್ಷಣ ಆಸ್ಪತ್ರೆಗೆ ಸೇರಬೇಕಾದರೆ ಅಂಬ್ಯುಲೆನ್ಸ್ ವ್ಯವಸ್ಥೆ ಹೇಗಿರಲಿದೆ? ಈ ಇಡೀ ವ್ಯವಸ್ಥೆಯನ್ನು ಸರ್ಕಾರದ ಯಾವ ಸಂಸ್ಥೆ ನಿರ್ವಹಿಸು ತ್ತಿದೆ? ಇದೆಲ್ಲದರ ಮಾಹಿತಿ ಜನರು ಪಡೆಯುವುದು ಹೇಗೆ? ಇದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆಯೇನಾದರೂ ಇದೆಯೇ ಎಂಬ ಬಗ್ಗೆ ವಿವರ ನೀಡುವಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಿತು. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿರಿಗೆ ಚಿಕಿತ್ಸೆಗೆ ನಿಬಂಧನೆ ಇವೆಯೇ? ಎಂಬುದರ ಮಾಹಿತಿ ನೀಡಲು ಸೂಚಿಸಿದೆ.
ಸೂಕ್ತ ತನಿಖೆ ನಡೆಸಿ: ವ್ಯಕ್ತಿಯೊಬ್ಬರು 18 ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾವ ಆಸ್ಪತ್ರೆಯೂ ಆತನನ್ನು ದಾಖಲಿಸಿಕೊಂಡಿಲ್ಲ. ಕೊನೆಗೆ ಆತ ವಿಕ್ಟೋರಿಯಾ ಆಸ್ಪತ್ರೆಯ ಬಾಗಿಲ ಬಳಿ ಬಂದಾಗ ಸಾವನ್ನಪ್ಪಿದ್ದಾನೆ. ಈ ಕುರಿತು ವರದಿಯಾಗಿದೆ ಎಂದು ವಕೀಲ ವೆಂಕಟೇಶ್ ದಳವಾಯಿ ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿ ದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಒಂದೊಮ್ಮೆ ಈ ವರದಿ ನಿಜವಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಯಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದಟಛಿ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿತು.
ಸೋಂಕಿತರ ಅಂತ್ಯಕ್ರಿಯೆ ಹೇಗೆ?: ಕೋವಿಡ್-19ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಗೆ ಆಯಾ ಧಾರ್ಮಿಕ ನಂಬಿಕೆಗಳ ಅನು ಗುಣವಾಗಿ ಗೌರವಯುತ ಅಂತ್ಯ ಕ್ರಿಯೆ ನಡೆ ಸಲು ಲಿಖೀತ ಶಿಷ್ಟಾಚಾರ ಅಥವಾ ಮಾರ್ಗಸೂಚಿ ಗಳಿವೆಯೇ? ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಮುಟ್ಟುವುದ ರಿಂದಲೂ ಸೋಂಕು ಹರಡುತ್ತದೆ ಎಂಬುದನ್ನು ದೃಢಪಡಿಸುವುದಕ್ಕೆ ವೈಜ್ಞಾನಿಕ ಅಭಿಪ್ರಾಯವೇನಾದರೂ ಸರ್ಕಾರದ ಬಳಿ ಇದೆಯೇ? ಎಂಬ ಬಗ್ಗೆ ಸರ್ಕಾರ ಗುರುವಾರ (ಜು.9) ಉತ್ತರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಆಹಾರ ಭದ್ರತೆ ಕೈ ಮೀರಿದೆ: ವಿಚಾರಣೆ ವೇಳೆ ವಕೀಲ ಕ್ಲಿಫ್ಟನ್ ರೋಝಾ ರಿಯೋ ವಾದ ಮಂಡಿಸಿ, ನಗರದಲ್ಲಿರುವ ಕಂಟೈನ್ಮೆಂಟ್ ಪ್ರದೇಶದಲ್ಲಿ ಆಹಾರ ಭದ್ರತೆ ಕೈ ಮೀರಿ ಹೋಗಿದೆ. ಈ ದಿನ ಬೆಳಗ್ಗೆ (ಮಂಗಳ ವಾರ) ಮೂರು ಕಂಟೈನ್ಮೆಂಟ್ ಪ್ರದೇಶದಲ್ಲಿನ 900 ಕುಟುಂಬಗಳು, ತಮಗೆ ತಿನ್ನುವುದಕ್ಕೆ ಅನ್ನ ಇಲ್ಲ ಎಂಬುದಾಗಿ ತಿಳಿಸಿವೆ. ಅವುಗಳ ಪಟ್ಟಿಯನ್ನು ಬಿಬಿಎಂಪಿ ಹಾಗೂ ನಗಾರಭಿವೃದಿ ಇಲಾಖೆ ನೀಡಿದ್ದರೂ, ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಕುರಿತು ಮಾಹಿತಿ ನೀಡಬೇಕು ಎಂದು ಬಿಬಿಎಂಪಿಗೆ ಸೂಚಿಸಿದೆ.