Advertisement

Covid Scam: ಕೋವಿಡ್‌ ಅಕ್ರಮ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ: ಬಿ.ಶ್ರೀರಾಮುಲು

01:34 AM Nov 10, 2024 | Team Udayavani |

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಗರಣಗಳನ್ನು ಮುಚ್ಚಿಹಾಕಲು ನನ್ನ ಮತ್ತು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೇಲೆ ಅಭಿಯೋಜನೆಗೆ ಶಿಫಾರಸು ಮಾಡಲು ಮುಂದಾಗಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Advertisement

ಸಂಡೂರು ಕ್ಷೇತ್ರದ ಬನ್ನಿಹಟ್ಟಿ ಗ್ರಾಮದ ಪ್ರಚಾರ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು. ಕೋವಿಡ್‌ ಸಂದರ್ಭ ಭ್ರಷ್ಟಾಚಾರ ನಡೆದಿದೆ ಎಂದು ಹೇಳುತ್ತಿರುವ ಸಿಎಂ, ಅಧಿ ಕಾರಕ್ಕೆ ಬಂದು ಒಂದೂವರೆ ವರ್ಷಗಳ ಕಾಲ ಏಕೆ ತುಟಿಬಿಚ್ಚಲಿಲ್ಲ. ಕಾಂಗ್ರೆಸ್‌ ಸರಕಾರದ ಇಂತಹ ಗೊಡ್ಡು ಬೆದರಿಕೆ ನನಗೆ ಏನು ಮಾಡದು. ನಾನು ಸಚಿವನಾಗಿದ್ದ ಅವಧಿಯಲ್ಲಿ ಕಲಬುರಗಿ ಮೂಲಕ ಕೊರೊನಾ ರಾಜ್ಯದ ತುಂಬೆಲ್ಲ ಹರಡಿತ್ತು. ಆಗ ಕಾರ್ಯಪಡೆ ರಚಿಸಿಕೊಂಡು ಕೆಲಸ ಮಾಡಿದ್ದೇವೆ ಎಂದರು.

ವಾಲ್ಮೀಕಿ ಹಗರಣ ಏಕೆ ಆಯಿತು ಅಂತ ನಾವು ಜನರಿಗೆ ಹೇಳುತ್ತಿದ್ದೇವೆ. ಇದನ್ನೆಲ್ಲ ಮುಚ್ಚಿಹಾಕೋ ಷಡ್ಯಂತ್ರವಾಗಿ ಈಗ ಕೋವಿಡ್‌ ವಿಚಾರ ತೆಗೆದಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next