Advertisement

ಕೃಷಿ ವಿಜ್ಞಾನ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಿ

07:52 PM Jun 30, 2021 | Girisha |

ಇಂಡಿ: ಪಟ್ಟಣದಲಿ ಕೃಷಿ ವಿಜ್ಞಾನ ಕೇಂದ್ರ ಇದ್ದರೂ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳೂ ಇದುವರೆಗೂ ದೊರೆಯದೇ ಇರುವುದು ಖೇದಕರ ಸಂಗತಿಯಾಗಿದೆ. ಮುಖ್ಯವಾಗಿ ರೈತರಿಗೆ ಅವಶ್ಯವಿರುವ ಮಣ್ಣು ಮತ್ತು ನೀರು ಪರೀûಾ ಘಟಕ ಮತ್ತು ಗೊಬ್ಬರದ ಗುಣಮಟ್ಟ ಪರೀಕ್ಷಿಸಲು ಪ್ರಯೋಗಾಲಯ ಇಲ್ಲ. ಮಣ್ಣು, ನೀರು ಪರೀಕ್ಷೆಗೆ ವಿಜಯಪುರಕ್ಕೆ ಹೋಗಬೇಕಾಗಿದ್ದು, ಗೊಬ್ಬರದ ಗುಣಮಟ್ಟ ಪರಿಶೀಲಿಸಲು ಬೆಳಗಾವಿ ಅಥವಾ ಧಾರವಾಡಕ್ಕೆ ಮಾದರಿ ಕಳುಹಿಸಿ ಕೊಡಬೇಕಾಗಿದೆ.

Advertisement

ಗೊಬ್ಬರದ ಮಾದರಿ ಪರೀಕ್ಷೆಗೆ ಕಳುಹಿಸಿದ 15 ದಿನಗಳ ನಂತರ ಮತ್ತು ಒಂದು ತಿಂಗಳ ಒಳಗಾಗಿ ಪರೀûಾ ವರದಿ ಬರುತ್ತಿದ್ದು ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಸದ್ಯ ಅವಶ್ಯವಾಗಿರುವ ಫರ್ಟಿಲೈಸರ್‌ ಟೆಸ್ಟಿಂಗ್‌ ಲ್ಯಾಬ್‌ ಅನ್ನು ಇಂಡಿ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ನಿರ್ಮಾಣ ಮಾಡಿ ಅನುಕೂಲ ಮಾಡಿ ಕೊಡಬೇಕೆಂಬುವುದು ರೈತ ಸಂಘಟನೆಗಳು ಮತ್ತು ಪ್ರಗತಿಪರ ರೈತರ ಕೂಗಾಗಿದೆ.

ತಾಲೂಕಿನಲ್ಲಿ ಹಲವು ವರ್ಷಗಳಿಂದ ಹಲವಾರು ಬಾರಿ ನಕಲಿ ಗೊಬ್ಬರ ಮತ್ತು ಕೀಟನಾಶಕ ಔಷ ಧಗಳು ಮಾರಾಟವಾಗುತ್ತಿರುವ ಬಗ್ಗೆ ಕೃಷಿ ಇಲಾಖೆ ಅ ಧಿಕಾರಿಗಳು ದಾಳಿ ನಡೆಸಿದರೂ ಅಂತಹ ದಂಧೆಗಳು ಮರುಕಳಿಸುತ್ತಲೇ ಇವೆ. ಇದಕ್ಕೆ ನಿದರ್ಶನವೆಂಬಂತೆ ಜೂನ್‌ 21ರಂದು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಕಲಿ ಗೊಬ್ಬರ ಅಡ್ಡೆ ಮೇಲೆ ಕೃಷಿ ಇಲಾಖೆ ಅಧಿ ಕಾರಿಗಳು ದಾಳಿ ನಡೆಸಿ ಗೊಬ್ಬರ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಗೊಬ್ಬರ ಗುಣಮಟ್ಟ ಪರಿಶೀಲಿಸಲು ಪ್ರಯೋಗಾಲಯ ಇಲ್ಲದ ಕಾರಣ ಕೃಷಿ ಇಲಾಖೆ ಅಧಿ ಕಾರಿಗಳು ಗೊಬ್ಬರದ ಮಾದರಿ ಸಂಗ್ರಹಿಸಿ ಧಾರವಾಡಕ್ಕೆ ಕಳುಹಿಸಿ ಕೊಟ್ಟಿದ್ದು ಇನ್ನೂ ವರದಿ ಬಂದಿಲ್ಲ.

ವರದಿ ಬರಲು ಇನ್ನೂ ಕನಿಷ್ಠ 10-12 ದಿನಗಳಾದರೂ ಬೇಕು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಪ್ರಯೋಗಾಲಯ ನಮ್ಮ ಜಿಲ್ಲೆಯಲ್ಲಿ ಅಥವಾ ಕೃಷಿ ವಿಜ್ಞಾನ ಕೇಂದ್ರ ಇಂಡಿಯಲ್ಲಿಯೇ ನಿರ್ಮಿಸಿ ಅದಕ್ಕೆ ಅವಶ್ಯವಿರುವ ಯಂತ್ರೋಪಕರಣ ಮತ್ತು ಸಿಬ್ಬಂದಿ ನೇಮಕ ಮಾಡಿದರೆ ಇಡಿ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ರೈತರು ತಾವು ಖರೀದಿಸಿದ ಗೊಬ್ಬರ ಡೂಪ್ಲಿಕೇಟ್‌ ಎಂದು ತಿಳಿದರೆ ಕೂಡಲೆ ಮಾದರಿ ತೆಗೆದು ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next