Advertisement

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನೆರವು ನೀಡಿ

06:17 PM Jan 16, 2021 | Team Udayavani |

ಶಿರಹಟ್ಟಿ: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಸ್ಥಾಪನೆಯಾಗಲಿರುವ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಸಕ್ತರು ತನು-ಮನ-ಧನ ಸಹಾಯ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಬೇಕೆಂದು ಶಿರಹಟ್ಟಿಯ ಜ.ಫಕೀರೇಶ್ವರ ಸಂಸ್ಥಾನಮಠದ ಶ್ರೀ ಜ.ಫ.ಸಿದ್ದರಾಮ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ಶಿರಹಟ್ಟಿಯಲ್ಲಿ ವಿಶ್ವಹಿಂದೂ ಪರಿಷತ್‌ ವತಿಯಿಂದ ಆಯೋಜಿಸಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ  ಸಮರ್ಪಣಾ ಅಭಿಯಾನಕ್ಕೆ ಶ್ರೀ ಮರಿಯಮ್ಮದೇವಿ ದೇವಸ್ಥಾನದ ಬಳಿ ಚಾಲನೆ ನೀಡಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಹನುಮಂತ ದೇವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕತೃì ಶ್ರೀ ಜ.ಫಕೀರೇಶ್ವರರು ಸಾರಿದಂತಹ ದ್ವೇಷ ಬಿಡು-ಪ್ರೀತಿ ಮಾಡು ಎಂಬ ದಿವ್ಯ ಸಂದೇಶಕ್ಕನುಗುಣವಾಗಿ ಶ್ರೀರಾಮನೇ ಇರಲಿ, ರಹೀಮನೇ ಇರಲಿ ಎಲ್ಲರೂ ಒಂದೇ ಎಂಬ ಮನೋಭಾವವನ್ನು ಬೆಳೆಸುಕೊಳ್ಳಬೇಕು. ಶಿರಹಟ್ಟಿ ಕೋಮು ಭಾವೈಕ್ಯತೆಗೆ ಪ್ರಸಿದ್ಧಿ ಪಡೆದಿದೆ. ಆದ್ದರಿಂದ, ಇಂತಹ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಇದನ್ನೂ ಓದಿ:ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ: ಜೊಲ್ಲೆ

ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಸ್ವಾಮೀಜಿ ಮಾತನಾಡಿ, ವಿದೇಶಗಳಲ್ಲಿಯೂ ಶ್ರೀರಾಮನ ಸ್ಮರಣೆ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಶ್ರೀರಾಮನು ಕೂಡಾ ಮಹಾ ಶಿವಭಕ್ತನಾಗಿದ್ದ. ಅದಕ್ಕಾಗಿಯೇ ರಾಮೇಶ್ವರದಲ್ಲಿ ಜ್ಯೋತಿರ್ಲಿಂಗ ಸ್ಥಾಪನೆಯಾಗಿದೆ. ಜೊತೆಗೆ ನಮ್ಮ ಪಕ್ಕದಲ್ಲಿಯ ಸಂತೆ ಶಿಗ್ಲಿ, ಹುಬ್ಬಳ್ಳಿ, ರಾಣೆಬೆನ್ನೂರ, ಗುಲಬರ್ಗಾ ಮುಂತಾದ ಕಡೆಗಳಲ್ಲಿ ಲಿಂಗ ಸ್ಥಾಪನೆಯಾಗಿವೆ. ದೇಶದ ಬಹುಜನತೆ ಬಹಳ ವರ್ಷಗಳ ಕನಸು ಸಾಕಾರಗೊಳ್ಳುತ್ತಿದ್ದು, ಇಂತಹ ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲರೂ ಧನಸಹಾಯ ಮಾಡಬೇಕು. ದೇವಸ್ಥಾನ ಮತ್ತು ಮಠಗಳ ಅಭಿವೃದ್ಧಿಗೂ ಮುಂದಾಗಬೇಕೆಂದರು. ವಿಹಿಪ ಪ್ರಾಂತ ಸಂಚಾಲಕ ವಿನಾಯಕ ತಳಗೇರಿ ಮಾತನಾಡಿದರು.

Advertisement

ನಟರಾಜ ರಾನಡೆ, ವೀರಣ್ಣ ಮಜ್ಜಗಿ, ಲಕ್ಷ್ಮಣ ಲಮಾಣಿ, ನಾಗರಾಜ ಕುಲಕರ್ಣಿ, ಫಕ್ಕೀರೇಶ ರಟ್ಟಿಹಳ್ಳಿ, ಬಿ.ಡಿ.ಪಲ್ಲೇದ, ಪ್ರವೀಣಗೌಡ ಪಾಟೀಲ, ರಾಜೀವರೆಡ್ಡಿ ಬಮ್ಮನಕಟ್ಟಿ, ಶರಣು ಚನ್ನೂರ, ಸಿದ್ರಾಮಪ್ಪ ಮೊರಬದ, ಸುರೇಶ ಅಕ್ಕಿ, ಯಲ್ಲಪ್ಪ ಇಂಗಳಗಿ, ರಾಜು ಹಲಗಲಿ, ನಾಗರಾಜ ಲಕ್ಕುಂಡಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next