Advertisement

ಪ್ರೋತಿಮಾ ಬೇಡಿ ಮತ್ತು ಖುದಾಗವಾ…

07:12 PM Sep 09, 2019 | mahesh |

ಅವಳಿಗೆ ಇಬ್ಬರಿಗೂ ಮಕ್ಕಳಿದ್ದಾರೆ..!!!! ಆದರೂ, ಹೀಗೇಕೆ – ಇದರ ಅಗತ್ಯವೇನು? ಪ್ರಶ್ನೆಗಳಿಗೆ ಉತ್ತರವಿಲ್ಲ. ಅವಳಿಗೆ ಹಗುರಾಗುವಾಗಂತೆ ಸುಮ್ಮನೆ ಕೇಳಿಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿ ತೋಚಲಿಲ್ಲ. ಇಷ್ಟಕ್ಕೂ ಇಂಥ ವಿಷಯಗಳಿಗೆ ನಾನು ತೀರಾ ರಾಂಗ್‌ ಪರ್ಸನ್‌ ಅಂಥ ಅವಳಿಗೆ ಗೊತ್ತು. ಅದ್ಯಾಕೋ ಮತ್ತೆ ಪ್ರೋತಿಮಾ ಬೇಡಿಯ ಪ್ರಶ್ನೆಗಳು ದಟ್ಟವಾದಂತೆನಿಸಿ ಸುಮ್ಮನಾಗಿಬಿಟ್ಟೆ.

Advertisement

ಮುಂದೆ ಓದಲಾಗದೇ ಕೂತಲ್ಲೇ ಚಡಪಡಿಸಿದೆ. ನೂರಾರು ಪ್ರಶ್ನೆಗಳ ಸುರಿಮಳೆಗೆ ತತ್ತರಿಸಿದಂತಾಗಿ. ಇನ್ನು ಸಾಧ್ಯವಾಗದೇ ಪುಸ್ತಕ ಮಡಿಚಿಟ್ಟು ಬಾಲ್ಕನಿ ಅಂಚಿಗೆ ಬಂದು ರಸ್ತೆಗೆ ಮುಖಮಾಡಿದೆ. ದೂರದಲ್ಲಿ ಕಂಡ ಅತ್ಯಾಪ್ತ ಸಂಪಿಗೆ ಮರದ ಜಡಿಮಳೆ ಯೊಟ್ಟಿಗಿನ ಗಾಳಿಯೊಂದಿಗೆ ತೇಲಿ ಬಂದ ಸಂಪಿಗೆಯ ಕಂಪು ತುಸು ಹಗುರವೆನಿಸಿತು. ಖಾಲಿ ಟೀ ಕಪ್ಪುಗಳೆತ್ತಿಕೊಂಡು ಸಿಂಕ್‌ ಗೆ ಸೇರಿಸಿ ಅಮ್ಮನನ್ನು ಕೂಗಿದೆ…

ಆ ಕಡೆಯಿಂದ “ಓ….ಇಲ್ಲಿದ್ದೇನೆ ಬಾ’ ಅನ್ನುವ ಉತ್ತರ..
ಸಂಜೆಯ ನಾಲ್ಕು ಮೂವತ್ತೈದು. ಟೀಪಾಯ್‌ ಮುಂದೆ ನೆಲದಲ್ಲಿ ಕೂತು ಹೂ ಕಟ್ಟುತ್ತಿದ್ದ ಅಮ್ಮನನ್ನೇ ತದೇಕವಾಗಿ ನೋಡುತ್ತಾ ಕೂತೆ. ಏನಾಯ್ತು ಅನ್ನುವಂತೆ ಕತ್ತೆತ್ತಿದರು. ಪ್ರೋತಿಮಾ ಬೇಡಿ ಎಂಬ ಈ ಮಣ್ಣಿನ ಅಚ್ಚರಿಯ ಬಗ್ಗೆ ಓದಿದ ನಂತರ ಮನಸೆಲ್ಲಾ ಕಲಸಿಟ್ಟಂತಾಗಿತ್ತು . ಒಂದೂ ಕಲ್ಮಶವಿಲ್ಲದ ಅಮ್ಮನ ಪ್ರಶಾಂತ ಚಹರೆ ಜೀವ ತುಂಬಿದಂತೆನಿಸಿ ಹಗುರನಿಸಿತು….

ಈ ಹಿಂದೆ ಕಮಲಾದಾಸ್‌ ಬಗ್ಗೆ ಓದಿದಾಗಲೂ ಅದೆಷ್ಟೋ ದಿನ ಭಾರವಾದ ಪ್ರಶ್ನೆಗಳ ಮೂಟೆ ಹೊತ್ತು ತಿರುಗಿದ್ದಿದೆ. ಮೊಬೈಲ್‌ ನ ರಿಂಗಣ…. ನೋಡಿದರೆ ಆಶಾ.. ಇದು ಅವಳ ಆರನೇ ಕರೆ.. ಬೆಳಗ್ಗೆಯಿಂದ ರಿಸೀವ್‌ ಮಾಡಿರಲಿಲ್ಲ…. ನನಗೂ ಪ್ರೋತಿಮಾ ಬೇಡಿ ಉಳಿಸಿದ ಭಯಂಕರ ಪ್ರಶ್ನೆಗಳಿಂದ ಬಿಡುವು ಬೇಕಿತ್ತು.

ಅಮ್ಮನಿಗೆ ಹೇಳಿ ಹೊರಬಿದ್ದೆ
ಗಂಡ ಪಕ್ಕದ ಮನೆಯಾಕೆಯೊಂದಿಗೆ ಮಾತಾಡುತ್ತಾನೆ ಎಂದೇ ನಾಲ್ಕಾರು ಮನೆ ಬದಲಿಸಿದ್ದಳು ಆಶಾ. ಆಗೆಲ್ಲಾ ಅವಳಿಗೆ ಬುದ್ದಿ ಹೇಳಿ ಸಾಕಾಗಿದ್ದೆವು. ಈಗ ಇವಳ ಟರ್ಮ್. ಎದುರು ಮನೆಯವನ ಬಗ್ಗೆ ಏನೋ ಸೆಳೆತವುಂಟಾಗಿ, ಅದು ಮೆಸೇಜ್‌ ವರೆಗೂ ಬಂದು ನಿಂತಿದೆ. ನಾಲ್ಕಾರು ದಿನಗಳಿಂದ ಆತನ ಮೆಸೇಜ್‌ ಇಲ್ಲದೇ ತಳಮಳ ಅನುಭವಿಸುತ್ತಿದ್ದಾಳೆ. ಇದನ್ನು ಹಂಚಿಕೊಂಡು ಹಗುರಾಗಬೇಕಿತ್ತೋ,ಏನೋ…

Advertisement

ಇಬ್ಬರಿಗೂ ಮಕ್ಕಳಿದ್ದಾರೆ..!!!! ಹೀಗೇಕೆ – ಇದರ ಅಗತ್ಯವೇನು? ಪ್ರಶ್ನೆಗಳಿಗೆ ಉತ್ತರವಿಲ್ಲ. ಅವಳಿಗೆ ಹಗುರಾಗುವಾಗಂತೆ ಸುಮ್ಮನೆ ಕೇಳಿಸಿಕೊಳ್ಳುವುದು ಬಿಟ್ಟರೆ ಬೇರೆ ದಾರಿ ತೋಚಲಿಲ್ಲ. ಇಷ್ಟಕ್ಕೂ ಇಂಥ ವಿಷಯಗಳಿಗೆ ನಾನು ತೀರಾ ರಾಂಗ್‌ ಪರ್ಸನ್‌ ಅಂಥ ಅವಳಿಗೆ ಗೊತ್ತು. ಅದ್ಯಾಕೋ ಮತ್ತೆ ಪ್ರೋತಿಮಾ ಬೇಡಿಯ ಪ್ರಶ್ನೆಗಳು ದಟ್ಟವಾದಂತೆನಿಸಿ ಸುಮ್ಮನಾಗಿಬಿಟ್ಟೆ. ಆಶಾ, ಕೆಳಗೆ ಲಾನ್‌ನಲ್ಲಿರುವ ಟೀ ತರುವುದಾಗಿ ಹೇಳಿದಳು. ಲಾನ್‌ನಲ್ಲಿ ದೊಡ್ಡದಾದ ದಾಸವಾಳದ ನಾಲ್ಕಾರು ಬೇರೆ-ಬೇರೆ ಬಣ್ಣದ ಗಿಡಗಳು ಸಂಜೆಯ ಸೂರ್ಯನ ಬಣ್ಣ ಹೊದ್ದು ಇನ್ನಷ್ಟು ಮೆರಗು ತಂದುಕೊಂಡಿದ್ದವು. ಲಾನ್‌ ಮಧ್ಯೆ ಕೂರಲು ಒಂದಷ್ಟು ಆಕರ್ಷಕ ಕುರ್ಚಿಗಳು. ಈ ಅಪಾರ್ಟ್‌ ಮೆಂಟ್‌ ನ ಮುಖ್ಯ ಸೆಳೆತ ಅಂದರೆ ಇದೇ.

ದಾಸವಾಳಗಳನ್ನೇ ದಿಟ್ಟಿಸುತ್ತಾ ಕೂತೆ. ಇಷ್ಟರಲ್ಲಿ ವೋ ಆಯೇಗಾ….. ಎನ್ನುವ ಹೆಂಗಸಿನ ತುಸು ಜೋರಾದ ಧ್ವನಿ ಕಿವಿಗೆ ಬಿತ್ತು. ತಿರುಗಿ ನೋಡಿದರೆ, ಒಬ್ಟಾಕೆ ಮೇಲಿನ ಫ್ಲೋರಿನಲ್ಲಿದ್ದ ಯಾರಿಗೋ ಏನನ್ನೋ ಒಪ್ಪಿಸುತ್ತಾ.. “ವೋ ಆಯೇಗಾ….. ರಂದು’ ಜೋರಾದ ಧ್ವನಿಯಲ್ಲಿ ಹೇಳುತ್ತಾ ಮುನ್ನೆಡೆದಳು..

ವೋ ಆಯೇಗಾ….. ಎನ್ನುವ ಆ ಶಬ್ದ ಅದೆಷ್ಟೋ ಸಾವಿರ ತರಂಗಗಳಾಗಿ ಅಪ್ಪಳಿಸಿತು. ಅದೆಷ್ಟೋ ಕಾಲ ಹಿಡಿದಿಟ್ಟ ಸಿನಿಮಾ “ಖುದಾಗವಾ’ದ ಸಂಪೂರ್ಣ ಸಾರಾಂಶ ಹಿಡಿದಿಟ್ಟ ವಾಕ್ಯ. ಅದೆಷ್ಟೋ ಸಾವಿರಾರು ಕಿಲೋಮೀಟರ್‌ ದೂರದಲ್ಲಿದ್ದರೂ ಆತ್ಮಗಳ ಮಟ್ಟದಲ್ಲಿ ಬೆರತು ಸಾಗುವ ಪ್ರಬಲ ಪ್ರೇಮಕತೆ. ಆತ್ಮದಿಂದ ಆತ್ಮಕ್ಕೆ ತಲುಪುವ ಸಂವೇದನೆಗಳ ಅಮಿತಾಬ…- ಶ್ರೀದೇವಿಯ ಪ್ರಬುದ್ದ ಅಭಿನಯದ ಆ ಸಿನೆಮಾ ಎಷ್ಟೋ ವರ್ಷಗಳು ಗುಂಗು ಹಿಡಿಸಿತ್ತು….

ಇಷ್ಟೇ ಏಕೆ, ಲಕ್ಷಣನ ಊರ್ಮಿಳೆ….ಭೈರಪ್ಪನವರ “ಯಾನ’ದ ಉತ್ತರೆ, ಟೈಟಾನಿಕ್‌ ನ ರೋಸ್‌ …. ಇಂಥ ಮನ ಕದಡುವ ಕತೆಗಳು ಜನಸಾಮಾನ್ಯರ ನಾಲಿಗೆ ತುದಿಯಲ್ಲಿ ಸದಾಕಾಲ ನಿಲ್ಲುವಂತಾಗುವುದು. ಅಸಾಮಾನ್ಯ ಅರ್ಪಣೆಯ ಆಳದಿಂದಲೇಇರಬಹುದೇನೋ.

ಪ್ರೋತಿಮಾ-ಕಮಲಾದಾಸ್‌ ಅಥವಾ ಹಲವು ಸಂಬಂಧಗಳಲ್ಲಿ ಹೆಣೆದುಕೊಳ್ಳಲು ಹೇಗೆ ಸಾಧ್ಯ? ನಿಜಕ್ಕೂ ಪ್ರತಿ- ಚಿಕ್ಕ ದೊಡ್ಡ ವಿಷಯಗಳಿಗೂ ಅವರವರದೇ ಡೆಫ‌ನೇಷನ್‌ ಗಳಿರುವಂತೆ ಇಂಥದ್ದೊಂದು ಬಂಧಕ್ಕೂ ಅವರವರದೇ ವ್ಯಾಖ್ಯೆ ಇರಬಹುದು. ಮತ್ತು ಅದೇ ಅವರಿಗೆ ಸರಿ ಕೂಡಾ..

ಆಶಾ ಟೀಯೊಂದಿಗೆ ತದೇಕವಾಗಿ ಮೊಬೈಲ್‌ ದಿಟ್ಟಿಸುತ್ತಾ ಬಂದವಳ ಮುಖ ಅರಳಿತ್ತು. ನನ್ನ ಇರುವಿಕೆ ವ್ಯತ್ಯಾಸ ತರದೇ ಇವಳು ಉತ್ತರವಾಗಿ ಮತ್ತೇನೋ ಮೊಬೈಲಿನಲ್ಲಿ ಟೈಪಿಸುತ್ತಿದ್ದಳು. ಜಗತ್ತನೇ ಮರೆಯುವಂತಿದ್ದ ಲೋಕದಲ್ಲಿದ್ದ ಇವಳನ್ನು ನೋಡಿ ಖುಷಿಪಡಬೇಕಾ? ನನ್ನ ಪ್ರಕಾರ ತಪ್ಪು ದಾರಿಯಲ್ಲಿ ಲೋಕ ಮರೆತಿದ್ದ ಇವಳಿಗೆ ಬೈಯಬೇಕಾ ಖೇದಪೂರ್ವಕ ತೊಯ್ದಾಟದಲ್ಲಿ ತೊಳಲಿದೆ.

ಬಂಧಗಳು ಆ ಗಳಿಗೆಗಳ ಸತ್ಯವಾಗದೇ ಗಳಿಗೆಯೊಂದು ನಿಜವಾಗಿ ಚಿರಂತನವಾಗಬಾರದೇ ಎನಿಸಿತು. ಟೀ ಕುಡಿದವಳೇ ಗಾಡಿ ಇಲ್ಲೇ ಬಿಟ್ಟು ಹೋಗುತ್ತೇನೆ….ನೀನು ಏಳಕ್ಕೆ ಬರುವಾಗ ತಾ….ನಾನು ಶಾರ್ಟ್‌ ಕಟ್‌ ನಲ್ಲಿ ನಡೆದು ಹೋಗುತ್ತೇನೆ ಅಂತ ಹೇಳಿ ಮೇಲೆದ್ದೆ. ಅವಳು ಅರ್ಧರ್ಧ ನಗೆ ಬೀರಿ ಬೀಳ್ಕೊಟ್ಟಳು. ಪ್ರೋತಿಮಾಳಿಂದ ಬಿಡಿಸಿಕೊಳ್ಳಲು ಹೋಗಿ ಮತ್ತೂಂದು ಸುತ್ತು ಅವಳನ್ನ ಸುತ್ತಿಕೊಂಡಿದ್ದೆ.

ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next