Advertisement

ಹಾಸ್ಟೇಲ್‌ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

09:58 AM Feb 27, 2022 | Team Udayavani |

ಕಲಬುರಗಿ: ನಗರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಆಹಾರ ವಿತರಣೆ ಮತ್ತು ಮೂಲಭೂತ ಸೌಕರ್ಯ ಕೊರತೆ ಖಂಡಿಸಿ ಡಾ| ಬಾಬುಜಗಜೀವನರಾಂ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟ ಮತ್ತು ಕಲಬೆರಕೆ ಆಹಾರ ಪೂರೈಸಲಾಗುತ್ತಿದೆ. ಅಲ್ಲದೇ, ಶೌಚಾಲಯಕ್ಕೆ ಸರಿಯಾದ ನೀರು ಸರಬರಾಜು ಇರುವುದಿಲ್ಲ ಮತ್ತು ಸ್ನಾನ ಮಾಡುವುದಕ್ಕೆ ಕೂಡ ನೀರು ಬರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಸತಿ ನಿಲಯ ಕೋಣೆಗಳ ಬಾಗಿಲು, ಕಿಟಕಿಗಳು ಮುರಿದು ಹೋಗಿವೆ. ಮಲಗಲು ಸ್ಥಳ ಸರಿಯಾಗಿ ಲಭ್ಯವಿರುವುದಿಲ್ಲ. ಒಂದು ಕೋಣೆಯಲ್ಲಿ ಸುಮಾರು 12ರಿಂದ 15 ವಿದ್ಯಾರ್ಥಿಗಳು ಇಕ್ಕಟ್ಟಿನ ಜಾಗದಲ್ಲಿ ಮಲಗುವಂತೆ ಆಗಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬಾರಿಗೆ ವಾರ್ಡನ್‌ ಗಮನಕ್ಕೆ ತರಲಾಗಿದೆ. ಆದರೂ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ರಾಜು ಕಟ್ಟಿಮನಿ, ರಮೇಶ ವಾಡೇಕರ, ಮುರುಳಿ ಗುತ್ತೇದಾರ, ಸೈದಪ್ಪ ಕಡೆಚೂರ, ಜಾನ್‌ ತಾರಫೈಲ್‌, ರಾಕೇಶ ವಾಗ, ದೇವಿಂದ್ರ ಬಿಳವಾರ ಸೇರಿ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next