Advertisement
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತಾ.ಪಂ. ಸಾಮಾನ್ಯ ಸಭೆ ನಡೆಯಿತು.ಸಭೆ ಆರಂಭವಾಗುತ್ತಿದ್ದಂತೆ ಕಪ್ಪು ಬಟ್ಟೆ ಹೊದ್ದುಕೊಂಡು ಆಗಮಿಸಿದ ಕೆ.ಟಿ. ವಲ್ಸಮ್ಮ, ವೇದಿಕೆಯಲ್ಲಿದ್ದವರಿಗೆ ಮನವಿ ನೀಡಿದರು. ಬಳಿಕ ಕಪ್ಪು ಬಟ್ಟೆಯನ್ನು ಬಾಯಿಗೆ ಕಟ್ಟಿ ಸಭೆಯಲ್ಲಿ ಕುಳಿತು ಕೊಂಡರು. ಇವರ ಪರವಾಗಿ ಸದಸ್ಯೆ ಉಷಾ ಅಂಚನ್ ವಿಷಯ ಪ್ರಸ್ತಾಪಿಸಲು ಮುಂದಾದರು. ಇದನ್ನು ತಡೆದ ತಾ.ಪಂ. ಇಒ ಜಗದೀಶ್, ಮತ್ತೂಮ್ಮೆ ವಿಚಾರವನ್ನು ಹೇಳುವ ಅಗತ್ಯವಿಲ್ಲ. ಮನವಿ ನೀಡಿದ್ದಾರೆ. ಆದರೆ ಸಭೆ ಯಲ್ಲಿ ಮನವಿ ನೀಡಿದ ಕಾರಣ, ಪರಿಶೀಲಿ ಸಲು ಸ್ವಲ್ಪ ಸಮಯ ಬೇಕು. ಬಳಿಕವಷ್ಟೇ ಉತ್ತರಿಸಲಾಗುವುದು ಎಂದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಮಾತನಾಡಿ, ಸೀಮಿತ ಅನುದಾನವಿದ್ದರೂ ಇರುವುದನ್ನು ಸಮಾನವಾಗಿ ಹಂಚಲಾಗಿದೆ. ಇದು ಸದಸ್ಯ ರಿಗೂ ಗೊತ್ತಿದೆ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ. ಕೆಡಿಪಿ ಸಭೆ ಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. ಪ್ರತಿಭಟನೆ ಹಿಂದೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡರು. ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಇದಕ್ಕೆ ಉತ್ತರ ನೀಡ ಬೇಕಾದವರು ಕಂದಾಯ
ಇಲಾಖೆ ಅಧಿಕಾರಿಗಳು. ಸದಸ್ಯೆ ನೀಡಿದ ಮನವಿಯಲ್ಲಿ ಹೆಚ್ಚಿನ ಬೇಡಿಕೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದೆ ಎಂದರು.
Related Articles
ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲೆಗಳು ಆರಂಭವಾಗಿ ಆರು ತಿಂಗಳು ಕಳೆಯಿತು. ಆದರೆ 3 ಸಾವಿರ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಕೊರತೆ ಇದೆ ಎಂಬ ಮಾಹಿತಿಯನ್ನು ಸಭೆಗೆ ನೀಡಲಾಯಿತು. ಇದು ಸದಸ್ಯೆ ಆಕ್ರೋಶಕ್ಕೂ ಕಾರಣವಾಯಿತು.
Advertisement
ಈ ಬಗ್ಗೆ ಮಾತನಾಡಿದ ಸದಸ್ಯೆ ತೇಜಸ್ವೀನಿ, ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಹೀಗಾಗಿದೆ. ಕೆಲವೇ ದಿನದಲ್ಲಿ ಪರೀಕ್ಷೆಗಳು ಬರಲಿವೆ. ಇದಕ್ಕೆ 3 ಸಾವಿರ ವಿದ್ಯಾರ್ಥಿಗಳು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಉಷಾ ಅಂಚನ್ ವಿವರಣೆ ಕೇಳಿದರು.
ಉತ್ತರಿಸಿದ ಶಿಕ್ಷಣ ಸಂಯೋಜನಾಧಿಕಾರಿ, ಮುಖ್ಯಶಿಕ್ಷಕರು ಬೇಡಿಕೆ ಸಲ್ಲಿಸಿದ ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಆದರೆ ಹೆಚ್ಚುವರಿ ಬೇಡಿಕೆಯ ಪಠ್ಯಪುಸ್ತಕ ಸರಬರಾಜಾಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳಲ್ಲಿ ಪ್ರಶ್ನಿಸಿದಾಗ, ಮುದ್ರಣ ಆಗಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದರು.