Advertisement

ದೇವೇಗೌಡರಿಂದ ಧರಣಿ ಎಚ್ಚರಿಕೆ

06:01 AM Jun 26, 2020 | Lakshmi GovindaRaj |

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆಯ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕ್ವಾರಿ ಮೈನಿಂಗ್‌ ಮಾಡಲು ಅವಕಾಶ ಕೊಡದೆ ಇದ್ದರೆ ಸಿಎಂ ಮನೆ ಎದುರು ಧರಣಿ ಕೂರುವುದಾಗಿ ಮಾಜಿ ಪ್ರಧಾನಿ ಎಚ್‌. ಡಿ.ದೇವೇಗೌಡರು ಎಚ್ಚರಿಕೆ  ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಡ್ಯದಲ್ಲಿ ವೈಷಮ್ಯದ ರಾಜಕಾರಣ ನಡೆಯುತ್ತಿದೆ.

Advertisement

ನನ್ನ ಸುದೀರ್ಘ‌ 60 ವರ್ಷಗಳ ರಾಜಕಾರಣದಲ್ಲಿ ಎಂದೂ ಕಂಡಿಲ್ಲದ ಕೆಟ್ಟ ವಾತಾವರಣ ತಾಲೂಕಿನಲ್ಲಿ ನಿರ್ಮಾಣವಾಗಿದೆ ಎಂದು ಅಸಮಾಧಾನ  ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಚ್‌.ಟಿ.ಮಂಜು ಎಂಬುವರ ಮೇಲೆ ಚುನಾವಣೆಯ ಸೇಡು ತೀರಿಸಿ ಕೊಳ್ಳಲು ಅಲ್ಲಿನ ಸಚಿವರು ಹೊರಟಿದ್ದಾರೆ. ಎಚ್‌.ಟಿ.ಮಂಜು  ಅವರು ಸ್ಟೋನ್‌ ಕ್ರಷರ್‌ ಮತ್ತು ಕ್ವಾರಿ ಮೈನಿಂಗ್‌ ಮಾಡಲು ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅನುಮತಿ ಪಡೆದುಕೊಂಡಿದ್ದರೂ ಸಹ ಸ್ಥಳೀಯ ರಾಜಕಾರಣದಿಂದ ಅವರಿಗೆ ವ್ಯವ ಹಾರ ಮಾಡಲು ಬಿಡುತ್ತಿಲ್ಲ.

ಇದರ ಬಗ್ಗೆ  ಮುಖ್ಯಮಂತ್ರಿ, ಡಿಸಿಎಂ ಸಚಿವರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.ಕಾನೂನು ಬದ್ಧ ವ್ಯವಹಾರ ನಡೆಸಲು ಸರ್ಕಾರ ಬಿಡದಿದ್ದರೆ ಇದೇ ತಿಂಗಳ 29ರಂದು ಸಿಎಂ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಮಾಡ ಲಾಗುವುದು ಎಂದು  ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next