Advertisement

ನಾಳೆ 108 ಆ್ಯಂಬುಲೆನ್ಸ್‌ ನೌಕರರ ಪ್ರತಿಭಟನೆ

09:30 PM Nov 15, 2022 | Team Udayavani |

ಬೆಂಗಳೂರು: ಕಳೆದ ಎರಡು ತಿಂಗಳ ವೇತನ ಪಾವತಿಸದ ಹಿನ್ನೆಲೆಯಲ್ಲಿ 108 ಆ್ಯಂಬುಲೆನ್ಸ್‌ ನೌಕರರು ನ.17ರಂದು ಸೇವೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Advertisement

ಸರ್ಕಾರದ “108-ಆರೋಗ್ಯ ಕವಚ’ ಯೋಜನೆ ನಿರ್ವಹಿಸುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯಡಿ 2,500 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಈ ಸಂಸ್ಥೆಯು ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನ ವೇತನ ಪಾವತಿಸಿಲ್ಲ. ಗುರುವಾರ ಸಂಜೆಯೊಳಗೆ ವೇತನ ಪಾವತಿ ಆಗದಿದ್ದರೆ ಸೇವೆಗೆ ಗೈರುಹಾಜರಾಗಿ ಪ್ರತಿಭಟನೆ ನಡೆಸುವುದಾಗಿ 108 ಆ್ಯಂಬುಲೆನ್ಸ್‌ ಸಿಬ್ಬಂದಿ ಎಚ್ಚರಿಕೆ ಕೊಟ್ಟಿದ್ದಾರೆ.

ಆರೋಗ್ಯ ಇಲಾಖೆಯು ಈಗಾಗಲೇ ಜಿವಿಕೆ ಸಂಸ್ಥೆಗೆ ಪತ್ರ ಬರೆದು, ವೇತನ ಪಾವತಿಸುವಂತೆ ಸೂಚಿಸಿದೆ. ವೇತನ ವಿಚಾರವಾಗಿ ಸಿಬ್ಬಂದಿಯು ಕಳೆದ ತಿಂಗಳೂ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು. ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಅವರು ಜಿವಿಕೆ ಸಂಸ್ಥೆಯ ಪ್ರತಿನಿಧಿ ಹಾಗೂ ಸಿಬ್ಬಂದಿಯ ಜತೆಗೆ ಸಭೆ ನಡೆಸಿ ಬಾಕಿ ವೇತನ ನ.14ರೊಳಗೆ ಪಾವತಿಸುವಂತೆ ಸೂಚಿಸಿದ್ದರು. ಇದೀಗ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ ಸಿಬ್ಬಂದಿ ಸರ್ಕಾರ ಹಾಗೂ ಜಿವಿಕೆ ಸಮಸ್ಥೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next