ಹರಿಹರ: ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ರೈತರನ್ನು ಬಹುರಾಷ್ಟ್ರೀಯ ಕಂಪನಿಗಳ ಗುಲಾಮಗಿರಿಗೆ ತಳ್ಳಲು ಮುಂದಾಗಿದೆ ಎಂದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಾಯಿದೆ ತಿದ್ದುಪಡಿ ವಿರೋಧಿ ಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಾಯ್ದೆ ವಿರೋಧಿ ಸಿ ದೇಶಾದ್ಯಂತ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರರೈತ ಸಂಘಗಳು, ಮುಖಂಡರೊಂದಿಗಾಗಲಿ ಚರ್ಚೆ ನಡೆಸುತ್ತಿಲ್ಲ. ರೈತರ ವ್ಯವಸಾಯ ಭೂಮಿಯನ್ನು ಕಿತ್ತುಕೊಂಡು ಬಹುರಾಷ್ಟ್ರೀಯ ಕಂಪನಿಗಳ ಕಾಲಬುಡಕ್ಕೆ ಇಟ್ಟು ರೈತರನ್ನು ಕಾಯಂ ಗುಲಾಮರನ್ನಾಗಿಸುವ ಹುನ್ನಾರ ಕಾಯಿದೆಯಲ್ಲಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿದ ನೂತನ ಎಪಿಎಂಸಿ ಕಾಯ್ದೆಯಿಂದ ರೈತರು ತಾವು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ಸಿಗದೆ ಕೆಲವೇ ಬಂಡವಾಳಶಾಹಿಗಳು ನಿಗದಿಪಡಿಸುವ ಬೆಲೆಗೆ ಮಾರಬೇಕಾದ ಅನಿವಾರ್ಯತೆಯಿದೆ. ಇದರಿಂದ ರೈತರು ನೇಣುಹಾಕಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸರ್ಕಾರದ ಪೋಡಿಮುಕ್ತ ಅಭಿಯಾನದಲ್ಲಿ ಅಳತೆಗೆ ಆಯ್ಕೆಗೊಂಡಿರುವ ಗ್ರಾಮಗಳ ಪೋಡಿ ಅಳತೆ ಸರಿಯಾಗಿ ಮಾಡದ ಎಡಿಎಲ್‌ಆರ್ ಅವರನ್ನು ಸ್ಥಳಕ್ಕೆ ಕರೆಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದಾಗ, ಅವರು ಗ್ರಾಮಸಭೆಯೊಂದರಲ್ಲಿ ಭಾಗಿಯಾಗಿದ್ದಾರೆ ಎರಡು ದಿನಗಳಲ್ಲಿ ಕರೆಯಿಸಿ ಬೇಡಿಕೆ ಈಡೇರಿಸುವುದಾಗಿ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಭರವಸೆ ನೀಡಿದರು.
ಇದಕ್ಕೂ ಮುನ್ನ ರೈತರು ನಗರದ ಎಪಿಎಂಸಿ ಆವರಣದಿಂದ ಮಿನಿ ವಿಧಾನಸೌಧದವರೆಗೆ ಬೈಕ್ ರ್ಯಾಲಿ ನಡೆಸಿದರು. ಜಿಲ್ಲಾಧ್ಯಕ್ಷ ಪ್ರಭುಗೌಡ, ಎಂ.ಬಸಪ್ಪ, ಪಾಮೇನಹಳ್ಳಿ ಮಾರುತಿರಾವ್, ಗರಡಿ ಮನೆ ಬಸಣ್ಣ ಗುತ್ತೂರು, ಕುಣೆಬೆಳಕೆರೆ ಉಮೇಶ್, ಸಿರಿಗೆರೆ ಪಾಲಾಕ್ಷಪ್ಪ, ಕಮಲಾಪುರ ಕರಿಬಸಮ್ಮ, ಎಂ.ಬಿ.ಪಾಟೀಲ್ ಹೊಸಪಾಳ್ಯ, ಮಹೇಶ್ ದೊಗ್ಗಳ್ಳಿ, ಗೋವಿನಹಾಳು ಗದಿಗೆಪ್ಪ, ಕಡ್ಲೆಗೊಂದಿ ಬಸಪ್ಪ ರೆಡ್ಡಿ, ನಂದಿಗಾವಿ ಗದಿಗೆಪ್ಪ, ಎಂ.ಹೆಚ್.ಗೋವಿಂದರೆಡ್ಡಿ, ಲಕ್ಷ¾ಣ, ಮಹೇಶ್ವರಸ್ವಾಮಿ, ಚಂದ್ರಪ್ಪ, ಭರಮಗೌಡ ಮತ್ತಿತರರಿದ್ದರು.