Advertisement

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ಪ್ರತಿಭಟನೆ

05:15 AM May 21, 2020 | Lakshmi GovindaRaj |

ಮೈಸೂರು: ಕಾರ್ಪೋರೇಟ್‌ ಕಂಪನಿಗಳ ಲೂಟಿಗೆ ನೆರವಾಗುವ ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಮಾಡಲಾದ ತಿದ್ದುಪಡಿಯನ್ನು ವಾಪಸ್‌ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಭಾರತ ಕಮ್ಯುನಿಸ್ಟ್‌  ಪಕ್ಷದ (ಮಾರ್ಕ್ಸ್ವಾದಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಡೀಸಿ ಕಚೇರಿ ಮುಂಭಾಗ ಪ್ರತಿಭಟಿಸಿದ ಪ್ರತಿಭಟನಕಾರರು, ಕೊರೊನಾದಿಂದ ಕೃಷಿಕರು, ಕಾರ್ಮಿಕರು, ಬಡವರು ಬಿಕ್ಕಟ್ಟಿಗೆ ಸಿಲುಕಿದ್ದು, ಇವರನ್ನು ಮೇಲೆತ್ತಲು ಕ್ರಮ  ಕೈಗೊಳ್ಳಲು ಸರ್ಕಾರಗಳು ಕೈಗೊಂಡ ಕ್ರಮಗಳು ನಿರಾಶಾದಾಯಕವಾಗಿದೆ. ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿನಿಂದ ಮೇಲೆತ್ತುವ ದೂರದೃಷ್ಟಿಯಿಂದ ಕೂಡಿದವಲ್ಲ,

ಬದಲಿಗೆ ಶ್ರೀಮಂತರನ್ನು ಮತ್ತು ಕಾರ್ಪೋರೇಟ್‌ ಕಂಪನಿಗಳನ್ನು  ಸಂರಕ್ಷಿಸುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೆಳೆನಷ್ಟ, ನಿರುದ್ಯೋಗ, ಆರ್ಥಿಕ ಸಂಕಷ್ಟದ ಕಾರಣದಿಂದ ರೈತರ, ಗೇಣಿದಾರರ, ಮಹಿಳೆಯರ ಸಾಲಗಳನ್ನು ಮೈಕ್ರೋ ಸಂಸ್ಥೆಗಳದ್ದು ಸೇರಿದಂತೆ ಮನ್ನಾ ಮಾಡಬೇಕು. ಬೆಳೆನಷ್ಟ ಪರಿಹಾರ ನೀಡಬೇಕು.

ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯ ಬಾಕಿ ವೇತನವನ್ನು ಸರ್ಕಾರವೇ ಭರಿಸಬೇಕು ಎಂದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಬಸವರಾಜು, ಮುಖಂಡರಾದ ಲ. ಜಗನ್ನಾಥ್‌, ಜಯರಾಂ,  ಜಗದೀಶ್‌ ಸೂರ್ಯ, ವಿಜಯಕುಮಾರ್‌, ರಾಜೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next