Advertisement

ಎಸ್ ಡಿಪಿಐ- ಪಿಎಫ್ಐ ನಿಷೇಧ ಮಾಡದಿದ್ದರೆ ಉಗ್ರ ಹೋರಾಟ: ಪ್ರಮೋದ್ ಮುತಾಲಿಕ್

04:49 PM Feb 21, 2022 | Team Udayavani |

ಬೆಂಗಳೂರು: ಶಿವಮೊಗ್ಗದ ಘಟನೆಯಿಂದ ಕೇವಲ ನಾಚಿಕೆಯಾಗುತ್ತಿಲ್ಲ, ನೋವಾಗುತ್ತಿದೆ. ಎಸ್ ಡಿಪಿಐ- ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಲೇಬೇಕು. ಬಿಜೆಪಿ ಈ ಹಿಂದೆಯೂ ಬ್ಯಾನ್ ಮಾಡಬೇಕೆಂದು ಆಗ್ರಹಿಸಿತ್ತು. ಆದರೆ ಈಗ ಯಾಕೆ ಬಾಯಿ ಮುಚ್ಚಿಕೊಂಡು ಇದೆ? ಒಂದು ವೇಳೆ ಈ ಸಂಘಟನೆಗಳನ್ನು ಬ್ಯಾನ್ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

Advertisement

ಸಿಎಂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಅತ್ಯಂತ ದುರದೃಷ್ಟಕರ. ಇಬ್ಬರು ಆರೋಪಗಳ ಬಂಧನಕ್ಕೆ ನಾವು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಶ್ರೀರಾಮ ಸೇನೆ ಸೇರಿದಂತೆ ಹಲವು ಹಿಂದು ಸಂಘಟನೆಗಳು ಸಿಎಂ ಗೆ ಒಂದು ಮನವಿ ಕೊಟ್ಟಿದ್ದೇವೆ. ಹರ್ಷ ಕುಟುಂಬ ಬಡತನದಲ್ಲಿದೆ, ಅವರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಮನವಿ ಸಲ್ಲಿಸಿದ್ದೇನೆ. ನಮ್ಮ ಮನವಿಯನ್ನು ಸಿಎಂ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ:ಈಶ್ವರಪ್ಪ ರಾಷ್ಟ್ರಧ್ವಜ ವಿರೋಧಿ ಹೇಳಿಕೆ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಕಲ್ಲು ತೂರಾಟದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಇದು ಪೊಲೀಸರ ಫೈಲ್ಯೂರ್. ಶವಯಾತ್ರೆ ವೇಳೆಯೂ ಕಲ್ಲು ಎಸೆದಿದ್ದಾರೆಂಬ ಮಾಹಿತಿ ಬಗ್ಗೆಯೂ ಸಿಎಂಗೆ ತಿಳಿಸಿದ್ದೇವೆ. ಇದರ ಬಗ್ಗೆಯೂ ಮಾಹಿತಿ ಪಡೆದು ಕ್ರಮ ಜರುಗಿಸುತ್ತೇನೆಂದಯ ಸಿಎಂ ಹೇಳಿದ್ದಾರೆ ಎಂದು ಮುತಾಲಿಕ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next