Advertisement

ಇಮಡಾಪುರ ಅಭಿವೃದ್ದಿಗೆ ಆಗ್ರಹಿಸಿ ಸತ್ಯಾಗ್ರಹ

10:28 AM Jun 11, 2022 | Team Udayavani |

ಸೇಡಂ: ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಸ್ವತ್ಛತೆ ಮತ್ತು ಅಭಿವೃದ್ಧಿ ಮರೀಚಿಕೆಯಾಗಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ತಾಲೂಕಾಧ್ಯಕ್ಷ ರಾಮಚಂದ್ರ ಗುತ್ತೇದಾರ ಒತ್ತಾಯಿಸಿದರು.

Advertisement

ಆಡಕಿ ಗ್ರಾಮ ಪಂಚಾಯಿತಿ ಎದುರು ಇಮಡಾಪುರ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪಿಡಿಒ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಕರವೇಯಿಂದ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಇಮಡಾಪುರ ಗ್ರಾಮದಲ್ಲಿ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವದರಿಂದ ರಸ್ತೆಗಳು ಗಬ್ಬೆದ್ದು ನಾರುತ್ತಿವೆ. ಹೆಸರಿಗೆ ಮಾತ್ರ ಮಹಿಳಾ ಶೌಚಾಲಯವಿದ್ದು ನಿರ್ವಹಣೆ ಇಲ್ಲದೇ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಒ ಅವರಿಗೆ ಹಲವು ಬಾರಿ ಈ ಕುರಿತು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಮೊಬೈಲ್‌ ಕರೆಗಳನ್ನು ಸ್ವೀಕರಿಸುವುದೇ ಇಲ್ಲ. ಇದರಿಂದ ಸರ್ವಜನಿಕರು ತಮ್ಮ ಕೆಲಸ-ಕಾರ್ಯಗಳಿಗಾಗಿ ತೊಂದರೆ ಅನುಭವಿಸುವಂತೆ ಆಗಿದೆ. ಹೀಗಾಗಿ ಶೀಘ್ರವೇ ಪಿಡಿಒ ಅವರನ್ನು ವರ್ಗಾವಣೆ ಮಾಡಬೇಕು ಮತ್ತು ಇಮಡಾಪುರ ಗ್ರಾಮದಲ್ಲಿ ಸ್ವತ್ಛತಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಸಾಯಿರೆಡ್ಡಿ ಮನ್ನೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಶುಕ್ರವಾರದಿಂದ ಇಮಡಾಪುರ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಪ್ರತಿಭಟನಾ ಸ್ಥಳಕ್ಕೆ ತಾಪಂ ಸಿಬ್ಬಂದಿ ಶರಣಬಸಪ್ಪ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಮುಧೋಳ ಪೊಲೀಸ್‌ ಠಾಣೆ ಪಿಎಸ್‌ಐ ಇಂದಿರಾಬಾಯಿ ಪೊಲೀಸ್‌ ಬಂದೋಬಸ್ತ್ ಒದಗಿಸಿದ್ದರು.

ಪ್ರತಿಭಟನೆಯಲ್ಲಿ ಶ್ರೀನಿವಾಸರೆಡ್ಡಿ ಮದನಾ, ದೇವು ನಾಟೀಕಾರ್‌, ಮಲ್ಲಿಕಾರ್ಜುನ ಕಾಕಲವಾರ, ಚನ್ನಬಸಪ್ಪ ಬೆನಕನಹಳ್ಳಿ, ಸಂಜಪ್ಪ ನೀಲಿ, ರಾಘು ಹೂಡಾ, ಸಿದ್ದಲಿಂಗಪ್ಪ, ಚಂದ್ರಶೇಖರ ನಾಮವಾರ, ರವಿಸಿಂಗ್‌ ಇಮಡಾಪೂರ, ಭೀಮರೆಡ್ಡಿ, ಮಹೇಶ ದಳಪತಿ, ಹಸನಸಾಬ್‌, ನರೇಂದ್ರಸಿಂಗ್‌, ಅನೀಲಸಿಂಗ್‌, ಸುಭಾಷ, ವೆಂಕಟೇಶ ಕೋಡ್ಲಾ, ಭೀಮಾಶಂಕರ ಇಂದನೂರ, ನರಸಿಂಹ ನಾಟೀಕರ್‌, ಹಣಮಂತ, ಶಿವಾರೆಡ್ಡಿ, ಭದ್ರಂಗಸಿಂಗ್‌, ಯಲ್ಲಾಲಿಂಗ, ಮಹೇಂದ್ರ, ನಾಗರೆಡ್ಡಿ, ಭೀಮಾಶಂಕರ, ಗುಂಡಪ್ಪ, ಆಶಪ್ಪ, ಭಗವಂತ, ಮಹೇಶ, ದೇವಿಂದ್ರ ಹಂದರಕಿ, ಜಾವೀದ, ರಾಜುರೆಡ್ಡಿ, ಮೋಹನಸಿಂಗ್‌, ರಾಜು, ಶಿವುಕುಮಾರ, ರಮೇಶ, ವಿಕಾಸ, ನಾಗರಾಜ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next