Advertisement

ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

12:50 PM Jul 03, 2018 | |

ಮೈಸೂರು: ದಿನಗೂಲಿ ನೌಕರರ ಸಂಬಂಧಿಸಿದಂತೆ ಗುತ್ತಿಗೆ ನೌಕರರನ್ನು ಕಾಯಂ ಮಾಡುವುದು, ಸಮಾನ ವೇತನ ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ದಿನಗೂಲಿ ನೌಕರರ ಮಹಾ ಮಂಡಲಿ ನೇತೃತ್ವದಲ್ಲಿ ನೂರಾರು ದಿನಗೂಲಿ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. 

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗುತ್ತಿಗೆ ನೌಕರರು, 247ರ ಅನ್ವಯ ದಿನಗೂಲಿಯಿಂದ ಕಾಯಂ ಆಗಿ ಸೇವೆ ಸಲ್ಲಿಸಿದ ನೌಕರರಿಗೆ ಸುಪ್ರೀಂಕೋರ್ಟ್‌ನ ಪ್ರಕಾರ 8 ವರ್ಷಗಳ ದಿನಗೂಲಿ ಸೇವೆಯನ್ನು ಪಿಂಚಣಿಗೆ ಪರಿಗಣಿಸಬೇಕು,

ಕಾಯ್ದೆ ಅನ್ವಯ ನಿವೃತ್ತಿ ಹೊಂದಿದ ನೌಕರರಿಗೆ ಶೇ.100 ತುಟ್ಟಿ ಭತ್ಯೆ ನೀಡಬೇಕು. 30 ದಿನಗಳ ಗಳಿಕೆ ರಜೆಯನ್ನು ನಗದೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಂಬ ಘೋಷಣಾ ಫ‌ಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ನಗರದ ಪುರಭವನದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪುರಭವನ, ಕೆ.ಆರ್‌.ವೃತ್ತ, ದೇವರಾಜ ಅರಸ್‌ ರಸ್ತೆ, ಮೆಟ್ರೋಪೋಲ್‌ ವೃತ್ತ, ವಿನೋಬಾ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಪ್ರತಿಭಟನೆಯಲ್ಲಿ ಸರ್ಕಾರಿ ದಿನಗೂಲಿ ನೌಕರರ  ಮಹಾ ಮಂಡಲಿ ಅಧ್ಯಕ್ಷ ಡಾ.ಕೆ.ಎಸ್‌.ಶರ್ಮ, ಜಿಲ್ಲಾಧ್ಯಕ್ಷ ಎನ್‌.ಗಂಗಾಧರ್‌, ಚಾ.ನಗರ ಜಿಲ್ಲಾಧ್ಯಕ್ಷ ರಮೇಶ್‌, ಮಂಡ್ಯ ಜಿಲ್ಲಾಧ್ಯಕ್ಷ ಅಪ್ಪಾಜಪ್ಪ, ಕೊಡಗು ಜಿಲ್ಲಾಧ್ಯಕ್ಷ ಜಗದೀಶ್‌, ಹಾಸನ ಜಿಲ್ಲಾಧ್ಯಕ್ಷ ರಂಗೇಗೌಡ, ಉಡುಪಿ ಹಾಗೂ ಮಂಗಳೂರು ಘಟಕದ ಅಧ್ಯಕ್ಷ ಜಗನ್ನಾಥ್‌, ಜಯಶಂಕರ್‌ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ಇನ್ನಿತರ ಇಲಾಖೆಗಳ ದಿನಗೂಲಿ ನೌಕರರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next