ಮೈಸೂರು: ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದ ಅನುಕೂಲಕ್ಕಾಗಿ ಮುಂದಿನ ಬಜೆಟ್‌ನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸಬೇಕೆಂದು ಆಗ್ರಹಿಸಿ ಮೈಸೂರು ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಹಲವು ವರ್ಷಗಳಿಂದಲೂ ಸಾಮಾಜಿಕ ಜೀವನದಲ್ಲಿ ಸಾರ್ವಜನಿಕ ಸೇವೆ ಮಾಡಿಕೊಂಡು ಬಂದಿರುವ ಸವಿತಾ ಸಮಾಜದ ಜನರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಕುಲಕಸುಬಾಗಿ ಉಳಿಯಬೇಕಿದ್ದ ûೌರಿಕ ವೃತ್ತಿ ಇತ್ತೀಚಿನ ದಿನಗಳಲ್ಲಿ ವ್ಯಾಪಾರ ರೂಪತಳೆದಿದ್ದು, ಜಾತಿಬೇದವಿಲ್ಲದೆ ಅನೇಕರು ûೌರಿಕ ವೃತ್ತಿಯಲ್ಲಿ ತೊಡಗಿದ್ದಾರೆ.
ಇದರಿಂದಾಗಿ ಸವಿತಾ ಸಮುದಾಯದಲ್ಲಿ ಕಳವಳ ಮೂಡಿಸಿದ್ದು, ಇತ್ತೀಚಿನ ಬದಲಾವಣೆಯನ್ನು ಸಹಿಸಿಕೊಳ್ಳಲು ನಮ್ಮ ಸಮುದಾಯಕ್ಕೆ ಕಷ್ಟವಾಗುತ್ತಿದೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗಿದರು. ಹಣವಂತರು ಹೆಚ್ಚಾಗಿ ûೌರಿಕ ವೃತ್ತಿಯಲ್ಲಿ ತೊಡಗುತ್ತಿರುವುದರಿಂದ ಪೈಪೋಟಿ ಅನಿವಾರ್ಯವಾಗಿದೆ. ಇನ್ನೂ ಸವಿತಾ ಸಮಾಜದ ಅಭಿವೃದ್ಧಿಗೆ ಸರ್ಕಾರ ತಾಲೂಕುಮಟ್ಟದಲ್ಲಿ ನೀಡುವ ಆರ್ಥಿಕ ನೆರವು ಕೆಲವೇ ಮಂದಿಗೆ ಮಾತ್ರ ಸೀಮಿತವಾಗಿದೆ.
ಆದರೆ ರಾಜ್ಯದಲ್ಲಿ ಲಕ್ಷಾಂತರ ಮಂದಿ ಕೌÒರಿಕರಿದ್ದು, ಅವರನ್ನೇ ನಂಬಿರುವ ಅನೇಕರು ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸವಿತಾ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಎ.ಎಂ.ನಾಗರಾಜು, ರಾಜ್ಯ ಸವಿತಾ ಸಮಾಜದ ಮುಖಂಡ ರಾಜ್‌ಕುಮಾರ್, ನಗರಾಧ್ಯಕ್ಷ ಮಂಜುನಾಥ್, ಸವಿತಾ ಕೇಶಾಲಂಕಾರಿಗಳ ಸಂಘದ ಕಾರ್ಯಾಧ್ಯಕ್ಷ ರಾಮಪ್ರಕಾಶ್, ರಂಗಸ್ವಾಮಿ, ಎನ್.ಆರ್.ನಾಗೇಶ್ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.