ಶಿವಮೊಗ್ಗ: ಡಿಸಿ ಕಚೇರಿ ಆವರಣದ ಮೆಟ್ಟಿಲು ಮೇಲೆ ಆಜಾನ್ ಕೂಗಿದ ವಿಚಾರವನ್ನು ಖಂಡಿಸಿ ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟಿಸಿದ್ದು, ಗೋಮೂತ್ರ ಹಾಕಿ ಸ್ಥಳವನ್ನು ಶುದ್ದೀಕರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಪ್ರತಿಭಟಿಸಿದ್ದಾರೆ. ಮುಸಲ್ಮಾನರು ಮತಾಂಧತೆ ಹರಡುತ್ತಿದ್ದಾರೆಂದು, ಗೂಂಡಾ ಮುಸಲ್ಮಾನರು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ,ಸಂವಿಧಾನ ವಿರೋಧಿ ಎಸ್.ಡಿ.ಪಿ.ಐ. ನಾಯಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್ ಕೂಗಿರುವುದು ಅಕ್ಷಮ್ಯ ಅಪರಾಧ: ಕೆ.ಎಸ್.ಈಶ್ವರಪ್ಪ
ಈ ವೇಳೆ ಗೋಮೂತ್ರ ಸಿಂಪಡಣೆಗೆ ಮುಂದಾದ ಬಜರಂಗದಳ ಕಾರ್ಯಕರ್ತರು. ಡಿಸಿ ಕಚೇರಿ ಮುಂಭಾಗ ಗೋಮೂತ್ರ ಸಿಂಪಡಿಸಲು ಮುಂದಾದ ಕಾರ್ಯಕರ್ತರು. ಇದೇ ವೇಳೆ ಕಸಿದುಕೊಂಡ ಪೊಲೀಸರು ಗೋಮೂತ್ರದ ಬಾಟಲಿಯನ್ನು ಕಸಿದುಕೊಂಡಿದ್ದಾರೆ.
ಆದರೂ ಗೋಮೂತ್ರ ಸಿಂಪಡಿಸಿ ಜಾಗ ಶುದ್ಧಿ ಮಾಡಿದ ಮುಖಂಡರು. ದೇಶದ್ರೋಹಿ ಮತಾಂಧ ಮುಸಲ್ಮಾನರಿಗೆ ಧಿಕ್ಕಾರ ಕೂಗಿದ್ದಾರೆ. ಅಜಾನ್ ಕೂಗಿದ ವ್ಯಕ್ತಿ ಹಾಗೂ ಆತನ ಹಿಂದಿರುವ ವ್ಯಕ್ತಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.