Advertisement

ಪೌರ ನೌಕರರ ಪ್ರತಿಭಟನೆ

01:54 PM Jul 08, 2017 | Girisha |

ಸಿಂದಗಿ: ಪೌರ ಕಾರ್ಮಿಕರ ಮೇಲೆ ಪುರಸಭೆ ಸದಸ್ಯ ಹಲ್ಲೆ ಮಾಡಿದ್ದನ್ನು ಖಂಡಿಸಿ ಶುಕ್ರವಾರ ಪೌರ ನೌಕರರು ಕಚೇರಿ ಕೆಲಸ, ನೈರ್ಮಲೀಕರಣ ಹಾಗೂ ನೀರು ಸರಬರಾಜು ಬಂದ್‌ ಮಾಡಿ ಪುರಸಭೆ  ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ರಮೇಶ ಇಮ್ಮನದ ಅವರಿಗೆ ಪೌರ ನೌಕರರು ಮನವಿ ಸಲ್ಲಿಸಿದರು.

Advertisement

ಪಟ್ಟಣದ ಪುರಸಭೆಯ ಜಲ ಶುದ್ಧಿಕರಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರಾದ ಖಾಜು ಭಾಗಪ್ಪ
ಭಾವಿಮನಿ, ಭೀಮಣ್ಣ ಸಂಗಪ್ಪ ಕಟ್ಟಿಮನಿ ಅವರ ಮೇಲೆ ಪುರಸಭೆ ವಾರ್ಡ್‌ ನಂ. 16ರ ಸದಸ್ಯ ಗುರುಪಾದ ಮನಗೂಳಿ
ತಮ್ಮ ಬೆಂಬಲಿಗರೊಂದಿಗೆ ವಿನಾಕಾರಣ ಹಲ್ಲೆ ನಡೆಸಿ ನಿಂದನೆ ಮಾಡಿದ್ದಾರೆ. ಮನಗೂಳಿ ಅವರು ಕ್ಷಮೆ ಕೆಳಬೇಕು ಎಂದು
ಒತ್ತಾಯಿಸಿದರು. 

ಪೌರ ನೌಕರರ ಮೇಲೆ ಹಲ್ಲೆ ಮಾಡಿದ ಸದಸ್ಯ ಗುರುಪಾದ ಮನಗೂಳಿ ಅವರ ಸದಸ್ಯತ್ವ ರದ್ದು ಮಾಡಬೇಕು. ಇಲ್ಲದ
ಪಕ್ಷದಲ್ಲಿ ಉಗ್ರಾವದ ಹೋರಾಟದ ಎಚ್ಚರಿಕೆ ನೀಡಿದರು. ರಮೇಶ ಪಾಟೀಲ, ಅಬ್ಟಾಸಲಿ ಕಾಖಂಡಕಿ, ಸುನೀಲಕುಮಾರ ಸಾಬೋಜಿ,
ಅಭಿಷೇಕ ಪಾಂಡೆ, ಬಿ.ಆರ್‌. ಹಿರೇಮನಿ, ಎಸ್‌.ಬಿ. ಗೋನಜಾಳ, ಡಿ.ಎಸ್‌. ಅವರ್ಗಿ, ರೂಪಾ ಸಿಂಧೆ, ಪರಶುರಾಮ ಜವಳಿ, ದಯಾನಂದ ಕಲಬುರ್ಗಿ, ಜಗು ದೊಡಮನಿ, ಮಹಾದೇವಿ ಬಡಿಗೇರ, ಪರಶುರಾಮ ಜವಳಿ, ಎಸ್‌.ಎ. ಗತ್ತರಗಿ, ಡಿ.ಎಸ್‌. ಗೊಳಸಂಗಿ, ಭೀಮು ಕಾಂಬಳೆ, ಬಸು ಸಿನ್ನೂರ, ಸರೋಜಿನಿ ಬಸವರಾಜ, ಸಾವಿತ್ರಿ ಬಿಸಲಾನಳ, ಮಲ್ಲವ್ವ ಬ್ಯಾಕೋಡ, ಯಲ್ಲವ್ವ ಎಮ್ಮಿ, ಪೀರವ್ವ, ರೇಣುಕಾ ಚೌರ ಸೇರಿದಂತೆ ಪೌರ ನೌಕರರು ಹಾಗೂ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next