Advertisement
ಧರಣಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ ಹುಣಸೂರು, ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕಿನ ಉದ್ಯಾನದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ಪ್ರಾಣಹಾನಿ ಮತ್ತು ಬೆಳೆಹಾನಿ ಆಗುತ್ತಿದ್ದು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಕಾಡಾನೆಗಳ ನಿಯಂತ್ರಿಸುವಲ್ಲಿ, ಬೆಳೆ ನಷ್ಟಕ್ಕೆ ಪರಿಹಾರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ರೈತಸಂಘದ ನೇತೃತ್ವದಲ್ಲಿ ಅನೇಕ ಹೋರಾಟ ನಡೆಸಿದ ಪರಿಣಾಮ ಶಾಶ್ವತ ಪರಿಹಾರಕ್ಕಾಗಿ ರೈಲ್ವೆ ಕಂಬಿ ತಡೆಗೋಡೆ ಕಾಮಗಾರಿ ಮಂಜೂರಾದರು ಮಂದಗತಿಯಲ್ಲಿ ಸಾಗುತ್ತಿದೆ. ಸೋಲಾರ್ ಬೇಲಿ ಎಂಬುದು ಅಧಿಕಾರಿಗಳು ದುಡ್ಡು ಹೊಡೆಯುವ ಯೋಜನೆಯಾಗಿದೆಯಷ್ಟೆ. ನೂತನ ತಾಂತ್ರಿಕತೆ ಬಳಸಿ ಕಾಡಾನೆಗಳು ನಾಡಿಗೆ ಬರದಂತೆ ತಡೆಯಬೇಕು.
Related Articles
Advertisement
ಧರಣಿ ಸ್ಥಳದಲ್ಲಿ ತಹಶೀಲ್ದಾರ್ ಡಾ.ಅಶೋಕ್ ಮನವಿ ಸ್ವೀಕರಿಸಿ, ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ, ತಾ.ಅಧ್ಯಕ್ಷ ಚಿಕ್ಕಣ್ಣ, ಪ್ರಧಾನಕಾರ್ಯದರ್ಶಿ ರಾಮೇಗೌಡ, ಪಧಾದಿಕಾರಿಗಳಾದ ಬಸವರಾಜು, ಧನಂಜಯ,ವಿಷಕಂಠಪ್ಪ, ವಾಸು, ಈಶ್ವರ್, ರಾಮಕೃಷ್ಣೇಗೌಡ, ದಸಂಸದ ರಾಜು,ಸಿದ್ದೇಶ್ ಸೇರಿದಂತೆ ಅನೇಕ ರೈತರು ಬಾಗವಹಿಸಿದ್ದರು.
ಬೇಡಿಕೆಗಳಿವು ;ರೈಲ್ವೆ ಕಂಬಿಯನ್ನು ಭೇದಿಸಿ ಬರುವ ಆನೆಗಳನ್ನು ತಡೆಗಟ್ಟಲು ವ್ಯವಸ್ಥಿತ ಕ್ರಮವಾಗಬೇಕು. ಬೆಳೆ ನಷ್ಟಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ನಾಶಪಡಿಸುವ ತೆಂಗು-ಅಡಿಕೆ ಮರಗಳಿಗೆ ಸೂಕ್ತ ಪರಿಹಾರ ನೀಡಬೇಕು. ಅರಣ್ಯ ಇಲಾಖೆಯ ಮೂರು ಭಾಗಗಳನ್ನು ರದ್ದುಗೊಳಿಸಿ, ಒಂದೇ ವಿಭಾಗದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಅರಣ್ಯಇಲಾಖೆ ಬೆಳೆಸಿದ ಮರಗಳನ್ನು ಕೆ.ಎಫ್.ಸಿ ಬದಲು ಇಲಾಖಾ ಡಿಪೋ ಮೂಲಕ ಮಾರಾಟವಾಗಬೇಕು. ಹೆಚ್.ಡಿ.ಕೋಟೆ ತಾಲ್ಲೂಕು ಅಣ್ಣೂರು ಗ್ರಾಮದ ಅರಣ್ಯ ಭೂಮಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿಕೊಡಬೇಕು.