ಹಾಸನ: ಕಾವೇರಿ ನೀರಾವರಿ ನಿಗಮದಿಂದ ನಡೆಯುತ್ತಿರುವ ಪುನರ್ವಸತಿ ಕಾಮಗಾರಿ ವಿಳಂಬವಾಗಿರುವುದನ್ನು ಖಂಡಿಸಿ ಗೊರೂರಿನ ಹೇಮಾವತಿ ಯೋಜನೆ ಮುಖ್ಯ ಎಂಜಿನಿಯರ್ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು, ಕೆಲವು ಗ್ರಾಮಗಳ ಜನರು ಪ್ರತಿಭಟಿಸಿದರು.
ಆಲೂರು ತಾಲೂಕು ಮಗ್ಗೆ ಜಿಪಂ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಹೇಮಾವತಿ ಹಿನ್ನೀರಿನಿಂದ ಮುಳುಗಡೆಯಾಗಿ ಪುನರ್ವಸತಿಗೆ ಸೇರಿದ ಹಳ್ಳಿಗಳಾಗಿವೆ. ಈ ವ್ಯಾಪ್ತಿಯಲ್ಲಿಯ ರೈತರು 30 ರಿಂದ 40 ವರ್ಷಗಳಿಂದಜಮೀನು, ಮನೆ ಕಳೆದುಕೊಂಡು ಪುನರ್ವಸತಿ ಪಡೆದ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ತುಂಬಾ ತೊಂದರೆ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್ ದೂರಿದರು.
ರಸ್ತೆಗಳು ಸರಿಯಿಲ್ಲ: ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯು ತುಂಬಾ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗಳನ್ನು ಹಾನಿಮಾಡುತ್ತಿವೆ. ಈ ಹಳ್ಳಿಗಳಲ್ಲಿ ರಸ್ತೆಗಳು ಸರಿ ಇಲ್ಲದೆ ರೈತರು ಬೆಳೆದ ಬೆಳೆಗಳನ್ನು ಸಕಾಲಕ್ಕೆಮಾರುಕಟ್ಟೆಗೆ ಸಾಗಿಸಲು ಆಗದ ಕಾರಣ ತುಂಬಾ ನಷ್ಟ ಅನುಭಸುತ್ತಿದ್ದಾರೆ ಎಂದು ಹೇಳಿದರು.
ಬಿಲ್ ಪಾವತಿ ಆಗಿಲ್ಲ: ಈ ಹಿಂದೆ ಕಾವೇರಿ ನೀರಾವರಿ ನಿಗಮದಿಂದ ಪುನರ್ವಸತಿ ಹಳ್ಳಿಗಳ ಅಭಿವೃದ್ಧಿಗಾಗಿ ಕಾಮಗಾರಿಗಳು ಮಂಜೂರಾಗಿದ್ದು, ಕೆಲವು ಕಾಮಗಾರಿ ಪೂರ್ಣಗೊಂಡಿದ್ದರೂ ಬಿಲ್ ಪಾವತಿಯಾಗಿಲ್ಲ.ಇನ್ನು ಕೆಲವು ಅಪೂರ್ಣವಾಗಿವೆ. ಕೆಲವು ಎಂದು ದೂರಿದರು.
ಪುನಶ್ಚೇತನಕ್ಕೆ ಆಗ್ರಹ: ರಾಮೇನಹಳ್ಳಿ ಏತ ನೀರಾವರಿ ಯೋಜನೆ, ಮಣಿಗನಹಳ್ಳಿ ಏತ ನೀರಾವರಿ ಯೋಜನೆ, ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ, ಕಡಬಗಾಲ ಏತ ನೀರಾವರಿ ಯೋಜನೆ, ಗಂಜಿಗೆರೆ ಏತ ನೀರಾವರಿಯೋಜನೆ, ಹರೀಗೌಡನಹಳ್ಳಿ ಏತ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವುಗಳನ್ನು ಪುನಶ್ಚೇತನಗೊಳಿಸಬೇಕೆಂದು ಒತ್ತಾಯಿಸಿದರು.
ಮೇ ಒಳಗೆ ಕಾಮಗಾರಿ ಪೂರ್ಣ: ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಕಾವೇರಿ ನೀರಾವರಿನಿಗಮದ ಎಂಜಿನಿಯರ್, ಕೊರೊನಾ ಕಾರಣದಿಂದಕೆಲವೊಂದು ಕಾಮಗಾರಿ ವಿಳಂಬವಾಗಿದೆ. ಏಪ್ರಿಲ್,ಮೇ ತಿಂಗಳಳೊಗೆ ಕಾಮಗಾರಿ ಪೂರ್ಣಗೊಳಿ ಸಲಾಗುವುದು. ರಸ್ತೆ, ದೇವಾಲಯ, ಏತನೀರಾವರಿ ಯೋಜನೆಗಳ ಮತ್ತೂಮ್ಮೆ ಪರಿಶೀಲನೆ ಮಾಡಿ ಕಾಮಗಾರಿಗಳ ಎಲ್ಲಿಲ್ಲಿ ಸಮಸ್ಯೆಗಳಾಗಿವೆ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಗೊಳ್ಳಲಾಗುವುದು ಎಂದು ಭರವಸೆ ನೀಡಿದರು.