Advertisement

ಬೈಂದೂರು:ಅನಧಿಕೃತ ಮದ್ಯದಂಗಡಿ ಪ್ರಾರಂಭಕ್ಕೆ ವಿರೋಧಿಸಿ ಪ್ರತಿಭಟನೆ

01:30 AM Jul 11, 2017 | Team Udayavani |

ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಂಕೇಶ್ವರ ಕಾವೇರಿ ಮಾರ್ಗದ ಜನವಸತಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮದ್ಯದಂಗಡಿಯನ್ನು ವಿರೋಧಿಸಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ನಾಗರಾಜ ಗಾಣಿಗ ಬಂಕೇಶ್ವರ ಈ ಮಾರ್ಗವು ಜನವಸತಿ ಪ್ರದೇಶವಾಗಿದೆ ಮತ್ತು ವಿದ್ಯಾರ್ಥಿಗಳು ಮತ್ತು ಮಹಿಳೆಯರು ನಿತ್ಯ ಸಂಚರಿಸುತ್ತಾರೆ. ಈ ಭಾಗದಲ್ಲಿ ಮದ್ಯದಂಗಡಿ ನಿರ್ಮಾಣವಾದರೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ.  ಹೀಗಾಗಿ ಕಾವೇರಿ ಮಾರ್ಗದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದರು.

ಬೈಂದೂರು ವಿಶೇಷ ತಹಶೀಲ್ದಾರ್‌ಕಿರಣ ಗೌರಯ್ಯ ಮನವಿ ಸ್ವೀಕರಿಸಿ ಮಾತನಾಡಿ ಸಾರ್ವಜನಿಕರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸುತ್ತೇನೆ. ಸ್ಥಳ ತನಿಖೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ. ಈ ಕುರಿತು ಅನುಮತಿ ನಿರಾಕರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ  ಸುಬ್ರಾಯ್‌ ಶೇರುಗಾರ್‌, ಮಹೇಶ್‌ ಸೋಡಿತಾರ್‌, ಕಲಾವತಿ ನಾಗರಾಜ ಗಾಣಿಗ, ರಾಜು ದೇವಾಡಿಗ, ಶಂಕರ ದೇವಾಡಿಗ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next