Advertisement

ಸರ್ಕಾರದ ವೈಫ‌ಲ್ಯ ವಿರೋಧಿಸಿ ಧರಣಿ

05:12 AM Jun 18, 2020 | Lakshmi GovindaRaj |

ಮಂಡ್ಯ: ಸರ್ಕಾರದ ವೈಫಲ್ಯತೆ ವಿರೋಧಿಸಿ ಹಾಗೂ ಜನರ ಉದ್ಯೋಗ ಆಹಾರ, ಆರೋಗ್ಯ ಸುರಕ್ಷತೆಗಾಗಿ ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಡೀಸಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಆದಾಯ ತೆರಿಗೆ ಇಲ್ಲದ ಎಲ್ಲ ಕುಟುಂಬಗಳಿಗೆ 7500 ರೂ.ನಂತೆ 6 ತಿಂಗಳವರೆಗೆ ನಗದು ವರ್ಗಾವಣೆ ಮಾಡಬೇಕು.

Advertisement

ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಯಂತೆ ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತ್ರಿಯಡಿ ಹೆಚ್ಚಿಸಿದ ಕೂಲಿಯೊಂದಿಗೆ ಕನಿಷ್ಠ ವರ್ಷದಲ್ಲಿ 200 ದಿನಗಳ ಉದ್ಯೋಗ ನೀಡಬೇಕು. ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆವಿಸ್ತ ರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣವೇ ಒಂದು ನಿರುದ್ಯೋಗ  ಭತ್ಯೆಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಜೂ.3ರಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಅಂಗೀಕರಿಸಿರುವ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳ ಕುರಿತ ಎರಡು ಸುಗ್ರೀವಾಜ್ಞೆಗಳನ್ನು ಹಾಗೂ ಅಗತ್ಯ ವಸ್ತುಗಳ ಕಾಯ್ದೆ  ತಿದ್ದುಪಡಿ ಸುಗ್ರೀವಾ ಜ್ಞೆಗಳನ್ನು ವಾಪಸ್ಸು ಪಡೆಯಬೇಕು. ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ 1961ಕ್ಕೆ ಜೂ 11ರಂದು ತಿದ್ದುಪಡಿ ಸುಗ್ರೀವಾಜ್ಞೆಯ ಮೂಲಕ ಕೃಷಿ ಭೂಮಿ ಖರೀದಿಗೆ ಇದ್ದ ನಿರ್ಬಂಧವನ್ನು ತೆಗೆ ದುಹಾಕಿ ಯಾರು  ಬೇಕಾದರೂ ಕೃಷಿ ಭೂಮಿ ಖರೀ ದಿಸಲು ಅವಕಾಶ ನೀಡಬೇಕು.

ಈ ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎಂ. ಪುಟ್ಟಮಾದು, ಕುಮಾರಿ, ಚಂದ್ರಶೇಖರಮೂರ್ತಿ, ನಾರಾಯಣ  ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next