Advertisement

ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

08:36 PM Dec 16, 2019 | Lakshmi GovindaRaj |

ಮೈಸೂರು: ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ)ವಿರೋಧಿಸಿ ಎಸ್‌ಡಿಪಿಐ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ನಗರದ ರಂಗಾಚಾರ್ಲು ಪುರಭವನ ಆವರಣ ಹೊರತುಪಡಿಸಿ ಪುರಭವನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಲಂ 35ರ ಕೆ.ಪಿ. ಕಾಯ್ದೆ ಪ್ರಕಾರ ಪುರಭವನದ ಸುತ್ತಲಿನ 500 ಮೀಟರ್‌ ವಾಪ್ತಿಯಲ್ಲಿ ಯಾವುದೇ ಪ್ರತಿಭಟನೆ, ಸಭೆ-ಸಮಾರಂಭ, ಮೆರವಣಿಗೆ, ಬೈಕ್‌ ರ್ಯಾಲಿ ನಡೆಸುವುದನ್ನು ನಿಷೇಧಿಸಿ ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದರು.

Advertisement

ನಿಷೇಧದ ನಡುವೆಯೂ ಮಂಡಿ ಮೊಹಲ್ಲಾ, ಗೌಸಿಯಾ ನಗರ, ಕಲ್ಯಾಣ ಗಿರಿ, ರಾಜೀವ್‌ ನಗರ, ಉದಯ ಗಿರಿ, ಎನ್‌.ಆರ್‌.ಮೊಹಲ್ಲಾ, ಮಹದೇವಪುರ ಸೇರಿ ಹಲವಾರು ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಲ್ಪಸಂಖ್ಯಾತರು, ರಾಷ್ಟ್ರಧ್ವಜ ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ವಿರುದ್ಧ ವಾಗ್ಧಾಳಿ: ಈ ವೇಳೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನ ವಿರೋಧಿ, ಬಾಹಿರವಾಗಿ ಎನ್‌ಆರ್‌ಸಿ ಮತ್ತು ಸಿಎಬಿಯನ್ನು ಜಾರಿಗೆ ತರುತ್ತಿದೆ ಎಂದು ದೂರಿದರು.

ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದು ಜಿಡಿಪಿ ದರ ಶೇ.4.5ಕ್ಕೆ ಇಳಿದಿದೆ. ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲ. ಜವಳಿ, ಆಟೋ ಮೊಬೈಲ್‌ ಕ್ಷೇತ್ರ ಕುಸಿದು ಬಾಗಿಲು ಮುಚ್ಚುತ್ತಿವೆ. ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಈ ಬಗ್ಗೆ ಗಮನಹರಿಸದ ಕೇಂದ್ರ ಸರ್ಕಾರ, ತನ್ನ ವೈಫ‌ಲ್ಯವನ್ನು ಮರೆಮಾಚಲು ಜನರ ದಿಕ್ಕುತಪ್ಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರದಿಂದ ಜನರಿಗೆ ದ್ರೋಹ: ಎನ್‌ಆರ್‌ಸಿಯಿಂದ ಯಾವುದೇ ಪ್ರಯೋಜನಲ್ಲ. ಅಸ್ಸಾಂ ರಾಜ್ಯದ ಒಟ್ಟು 3.29 ಕೋಟಿ ಜನಸಂಖ್ಯೆಯಲ್ಲಿ ಕೇವಲ 12 ಲಕ್ಷ ಹೊರಗೆ ಉಳಿದರು. ಇದರಲ್ಲಿ ಆರು ಲಕ್ಷ ಮುಸ್ಲಿಂ, ಏಳು ಲಕ್ಷ ಎಸ್ಸಿ-ಎಸ್ಟಿ ಇತರೆ ವರ್ಗದವರಾಗಿದ್ದರು. ಈಗ ಅಲ್ಲಿ ನೆರೆಸಿರುವ 1.50 ಕೋಟಿ ವಲಸಿಗರಿಗೆ ಪೌರತ್ವ ಕೊಡುವ ಮೂಲಕ ಕೇಂದ್ರ ಸರ್ಕಾರ ಅಲ್ಲಿನ ಜನರಿಗೆ ದ್ರೋಹ ಬಗೆದಿದೆ ಎಂದು ಕಿಡಿಕಾರಿದರು.

Advertisement

ಎಲ್ಲರ ದಿಕ್ಕು ತಪ್ಪಿಸುತ್ತಿರುವ ಕೇಂದ್ರ: ಅಸ್ಸಾಂನಲ್ಲಿ 3.21 ಕೋಟಿ ಜನರಿಗೆ ಪೌರತ್ವ ಕೊಡಲು 1600 ಕೋಟಿ ಖರ್ಚಾಯಿತು. ಇನ್ನು ದೇಶದ 135 ಕೋಟಿ ಜನರಿಗೆ ಎನ್‌ಆರ್‌ಸಿ ಕೊಡಲು ಎಷ್ಟು ಹಣಬೇಕಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಜನರ ಸಮಸ್ಯೆ ಬಗ್ಗೆ ಗಮನಕೊಡದ ಆಳುವವರು ಎಲ್ಲರನ್ನೂ ದಿಕ್ಕುತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಸಂವಿಧಾನದ ಪರಿಚ್ಛೇದ 14,15ನ್ನು ಸ್ಪಷ್ಟವಾಗಿ ಉಲ್ಲಂ ಸಿದ್ದು, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರಸರ್ಕಾರ ತನ್ನ ನಿರ್ಧಾರ ಬದಲಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮೌಲ್ವಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುರಭವನದ ಸುತ್ತಲೂ ಪೊಲೀಸ್‌ ಪಹರೆ ಹಾಕಿ,ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next