Advertisement
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂನ ಬೋಳಮಾರನಹಳ್ಳಿ ಸಮೀಪದ ಬಜ್ಜೆಗೌಡನಪಾಳ್ಯದಿಂದ ಬಾಣಸವಾಡಿ ಮೂಲಕ ತಾವರೆಕೆರೆಗೆ ಸೇರುವ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ಶಾಸಕ ಡಾ.ಕೆ ಶ್ರೀನಿವಾಸಮೂ ರ್ತಿಗೆ ಆರೇಳು ವರ್ಷದಿಂದ ಮನವಿ ಮಾಡಿದರೂ, ಅನುದಾನ ನೀಡಿ ರಸ್ತೆ ಅಭಿವೃದ್ಧಿ ಮಾಡಲು ಹಿಂದೇಟು ಹಾಕುತ್ತಿ ದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ, ಗಾಂಧಿ ಪೋಟೋ ಎದುರು ಆಹೋರಾತ್ರಿ ಸತ್ಯಾಗ್ರಹ ಮಾಡುತ್ತಿದ್ದು, ಶಾಸಕರು ಸ್ಥಳಕ್ಕೆ ಬರುವ ತನಕ ನಮ್ಮ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಗ್ರಾಮಸ್ಥರ ಸಂಕಷ್ಟ ನೋಡದೆ ನ್ಯಾಯಕ್ಕಾಗಿ ರಸ್ತೆಯಲ್ಲಿ ಕುಳಿತು ಗಾಂಧೀ ಪೋಟೋ ಎದುರು ಧರಣಿ ಮಾಡಬೇಕಾದ ಅನಿವಾರ್ಯತೆ ಬಂದಿದೆ. ರಸ್ತೆ ಅಭಿವೃದ್ಧಿ ಮಾಡುವ ತನಕ ನಮ್ಮ ಧರಣಿ ನಿಲ್ಲುವುದಿಲ್ಲ. ಬಜ್ಜೆಗೌಡನಪಾಳ್ಯ ರಸ್ತೆ ಗಾಂಧಿಕಾಲದಿಂದಲೂ ಇದೇ ರೀತಿ ಇದ್ದು ಶಾಸಕರ ಬಳಿ ಆರೇಳು ವರ್ಷದಿಂದ ಮನವಿ ಮಾಡಿ ಸಾಕಾಗಿದೆ.- ಸಂದೀಪ್ ಬೋಳಮಾರನಹಳ್ಳಿ, ಸೋಲದೇವನಹಳ್ಳಿ ಗ್ರಾಪಂ ಸದಸ್ಯ
ಶಾಸಕರಿಗೆ ನಮ್ಮ ಗ್ರಾಮದ ಅಜ್ಜಿಯರು ಕಾಲಿಗೆ ಬಿದ್ದ ರಸ್ತೆ ಮಾಡಿಕೊಡಿ ಎಂದು ಬೇಡಿಕೊಂಡಿದ್ದಾರೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ, ನಾವು ಶಾಲಾ-ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ನಮ್ಮೂರಿನ ಜನ ಮತ ನೀಡಿಲ್ಲವೇ, ನಾವು ನಿಮ್ಮ ಕ್ಷೇತ್ರದ ಜನರಲ್ಲವೇ ನಾವು ಏನು ದ್ರೋಹ ಮಾಡಿದ್ದೀವಿ ಸ್ವಾಮಿ, ರಸ್ತೆ ಮಾಡಿ ನಮ್ಮನ್ನು ಉಳಿಸಿ. – ಸುಮಾ, ಬಜ್ಜೆಗೌಡನಪಾಳ್ಯ ವಿದ್ಯಾರ್ಥಿ
ನಾನು ಈಗಾಗಲೇ ಬಜ್ಜೆಗೌಡನಪಾಳ್ಯ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಿದ್ದೇನೆ. ಸರ್ಕಾರದ ಹಣಕಾಸಿನ ವಿಭಾಗದಿಂದ ಕೊನೆ ಹಂತದ ಅನುಮೋಧನೆ ಬಾಕಿ ಇದ್ದು, 10 ದಿನದಲ್ಲಿ ರಸ್ತೆ ಕಾಮಗಾರಿ ಆರಂಭ ಮಾಡುತ್ತೇವೆ. ಗ್ರಾಮಸ್ಥರು ಯಾವುದೇ ಧರಣಿ ಮಾಡುವ ಅವಶ್ಯಕತೆ ಇಲ್ಲ. ನಾವು ಅಭಿವೃದ್ಧಿ ಮಾಡಲು ಬದ್ಧವಾಗಿದ್ದೇವೆ. – ಡಾ. ಕೆ. ಶ್ರೀನಿವಾಸಮೂರ್ತಿ, ಶಾಸಕ