Advertisement

ನೂತನ ಪಿಂಚಣಿ ರದ್ದಿಗೆ ಪ್ರತಿಭಟನೆ

01:24 PM Oct 04, 2018 | |

ಚಿಂತಾಮಣಿ: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು
ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಪದಾಧಿಕಾರಿಗಳು ರಕ್ತ ಕೊಟ್ಟೇವು
ಪಿಂಚಣಿ ಬಿಡೆವು ಎಂಬ ಘೋಷಣೆ ಯಡಿ ರಕ್ತದಾನ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.

Advertisement

ರಕ್ತದಾನ ಮಾಡಿದ ಎನ್‌ಪಿಎಸ್‌ ನೌಕರರು ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೆ ಮೆರ
ವಣಿಗೆ ಮೂಲಕ ತೆರಳಿ ತಹಶೀಲ್ದಾರ್‌ ವಿಶ್ವನಾಥ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

 ನಮ್ಮ ಹಣಕ್ಕೆ ಭದ್ರತೆ ಇಲ್ಲ: ಸರ್ಕಾರ ನೂತನ ಪಿಂಚಣಿ ಯೋಜನೆ ಜಾರಿ ಮಾಡಿ ಯೋಜನೆಯಡಿಯಲ್ಲಿ ನೌಕರ
ರಿಂದ ವೇತನದಲ್ಲಿ ಪಡೆಯುವ ಶೇ.10 ರಷ್ಟು ಹಣವನ್ನು ಯಾವುದೇ ನಿರ್ಧಿಷ್ಟ ಕಾನೂನು ರಚಿಸದೆ, ಭದ್ರತೆ ನೀಡದೆ
ಷೇರು ಮಾರುಕಟ್ಟೆಗಳಲ್ಲಿ ತೊಡಗಿಸುತ್ತಿದೆ. ಈ ರೀತಿ ಹಣಕ್ಕೆ ಯಾವುದೆ ಭದ್ರತೆ ಇಲ್ಲ ಆದ್ದರಿಂದ ನೂತನ ಪಿಂಚಣಿ
ಯೋಜನೆಯನ್ನು ರದ್ದು ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಎನ್‌ಪಿಎಸ್‌ ನೌಕರರ ಸಂಘದ ಗೌರವ ಅಧ್ಯಕ್ಷ ಬಿ ಜನಾರ್ದನ ರೆಡ್ಡಿ, ಅಧ್ಯಕ್ಷ ಬಾಹುಬಲಿ
ಹಳಿಂಗಳಿ, ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷರಾದ ನರಸಿಂಹ. ಕೆ.ಎಸ್‌, ಜಗದೀಶ್‌.ಕೆ.ಎನ್‌, ಪ್ರಾಥಮಿಕ ಶಾಲಾ
ಶಿಕ್ಷಕರ ಸಂಘದ ಅಧ್ಯಕ್ಷ ಆಶೋಕ್‌ ಕುಮಾರ್‌, ರಾಜ್ಯ ಉಪಾಧ್ಯಕ್ಷ ಕೆ.ವಿ ಚೌಡಪ್ಪ, ಆರ್‌.ವಿ ರವಣಾರೆಡ್ಡಿ, ಸೇರಿದಂತೆ ಅನೇಕರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next