Advertisement

ಗೂಗಲ್‌ ನೌಕರರ ಪ್ರತಿಭಟನೆ

02:08 PM Nov 02, 2018 | |

ಸ್ಯಾನ್‌ಫ್ರಾನ್ಸಿಸ್ಕೊ,: ಗೂಗಲ್‌ ಕಂಪೆನಿಯಲ್ಲಿ ಕೆಲ ವರ್ಷಗಳ ಹಿಂದೆ ಸೇವೆ ಸಲ್ಲಿಸುತ್ತಿದ್ದ ಆ್ಯಂಡಿ ರುಬಿನ್‌ ಎಂಬ ಅಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪಗಳಿದ್ದರೂ, ಅವರಿಗೆ ಕಂಪೆನಿಯಿಂದ ಹೇರಳವಾದ ಹಣ ನೀಡಲಾಗಿದೆಯೆಂಬ ಮಾಧ್ಯಮ ವರದಿಯಿಂದ ಕೆರಳಿರುವ ಆ ಸಂಸ್ಥೆಯ ಮಹಿಳಾ ಸಿಬಂದಿ ವಿಶ್ವದಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

Advertisement

ಆ್ಯಂಡಿ ರುಬಿನ್‌ ವಿರುದ್ಧ ಆರೋಪಗಳು ಸಾಬೀತಾಗಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಕಂಪೆನಿ, 2014ರಲ್ಲಿ ರುಬಿನ್‌ ಕಂಪೆ‌ನಿಯನ್ನು ಬಿಟ್ಟಾಗ ಅವರಿಗೆ 658 ಕೋಟಿ ರೂ.ಗಳಷ್ಟು ಪರಿಹಾರ ನೀಡಿತ್ತು ಎಂಬ ಸ್ಫೋಟಕ ಮಾಹಿತಿಯನ್ನು “ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿತ್ತು.

ಪರಿಣಾಮ, ಗುರುವಾರ, ಸಂಸ್ಥೆಯ ಪ್ರಧಾನ ಕಚೇರಿಯಿ ರುವ ಸಿಲಿಕಾನ್‌ ವ್ಯಾಲಿಯಿಂದ ಹಿಡಿದು, ಟೋಕಿಯೋ, ಸಿಂಗಾಪುರ, ಲಂಡನ್‌, ಡಬ್ಲಿನ್‌ ಸೇರಿದಂತೆ ವಿಶ್ವಾದ್ಯಂತ ಉದ್ಯೋಗಿಗಳು ಕೆಲಸ ಮಾಡದೇ ಹಿಂದಿರುಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next