ಬಂಗಾರಪೇಟೆ: ವಾರದೊಳಗೆ ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಕಾರ್ಮಿಕರ 4 ಆದೇಶ ವಾಪಸ್ ಪಡೆಯದಿದ್ದರೆ ಪ್ರತಿ ಹಳ್ಳಿಯಲ್ಲೂ ಮತ ಹಾಕುವ ಬದಲು ಮುಖಕ್ಕೆ ಪೊರಕೆ ಮಂಗಳಾರತಿ ಮಾಡುವ ಚಳವಳಿ ಮಾಡಬೇಕಾಗುತ್ತದೆ ಎಂದು ಸರ್ಕಾರಗಳಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಕೆ ನೀಡಿದರು.
ರೈಲ್ವೆ ಇಲಾಖೆ ಮುಂದೆ ಸೌದೆಯಲ್ಲಿ ಅಡುಗೆ ಮಾಡುವ ಮುಖಾಂತರ ಹೋ ರಾಟ ಮಾಡಿ ರೈಲ್ವೆ ಅಧಿಕಾರಿ ಮಂಡೇಲ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿ ಮಾತನಾಡಿದರು. 2 ವರ್ಷ ಸಾಂಕ್ರಾಮಿಕ ರೋಗ ಮತ್ತೆ ರಡು ವರ್ಷ ಮುಂಗಾರು ಮಳೆ ಆರ್ಭಟ ಮತ್ತೆರಡು ವರ್ಷ ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಸಂಕಷ್ಟವಾಗಿದ್ದು ಕೂಲಿ ಕಾರ್ಮಿ ಕರ ಬದುಕಿನ ಜತೆ ಸರ್ಕಾರ ಚಲ್ಲಾಟ ವಾಡುತ್ತಿದೆ ಎಂದು ದೂರಿದರು.
ಏಕಾಏಕಿ ತಮಗೆ ಇಷ್ಟ ಬಂದ ಹಾಗೆ ಡೀಸೆಲ್, ಪೆಟ್ರೋಲ್ ಏರಿಕೆಯೊಂದಿಗೆ ಅಡುಗೆ ಅನಿಲದ ಬೆಲೆ ದಿಢೀರ್ ಏರಿಕೆಯಿಂದ ಸಾಮಾನ್ಯರ ಬದುಕು ಮತ್ತೆ ಒಲೆ ಊದುವ ನಿರ್ಧಾರಕ್ಕೆ ಬಂದಿರು ವುದು ಜನ ವಿರೋಧಿ ನೀತಿಗಳೇ ಕಾರಣ ಎಂದು ಆರೋಪಿಸಿದರು.
ಮತ್ತೆ ಹಳೇ ಪದ್ಧತಿ: ನಿರಂತರ ಸಿಲಿಂಡರ್ ಬೆಲೆ ಏರಿಕೆ ಹಿನ್ನಲೆ ಮಹಿಳೆಯರು ಸೌದೆ ಒಲೆ ಅಡುಗೆ ಮಾಡಲು ಮುಂದಾಗಿ ದ್ದಾರೆ. ಇದರಿಂದಾಗಿ ಕಾಡಿನ ನಾಶ , ಮಹಿಳೆಯರ ಆರೋಗ್ಯ ಹದಗೆಡುತ್ತದೆ. 1150 ಕೊಟ್ಟು ಸಿಲಿಂಡರ್ ಖರೀದಿಸುವ ಸಾಮರ್ಥ್ಯ ಇಲ್ಲದವರು. ಮತ್ತೆ ಹಳೇ ಪದ್ಧತಿ ಅಡುಗೆ ಮಾಡಲು ಮುಂದಾಗಿದೆ ಎಂದು ಆಕೊ›àಶ ವ್ಯಕ್ತಪಡಿಸಿದರು.
ಆದೇಶ ವಾಪಸ್ ಪಡೆಯಿರಿ: ಜಿಲ್ಲಾಧ್ಯಕ್ಷ ಈಕಂ ಬಳ್ಳಿ ಮಂಜುನಾಥ ಮಾತನಾಡಿ, 7ನೇ ವೇತನ ಜಾರಿಗಾಗಿ ಲಕ್ಷ ಲಕ್ಷ ಸಂಬಳ ಪಡೆದು ಕೆಲವೇ ಗಂಟೆ ಕೆಲಸ ನಿರ್ವ ಹಿಸುವ ಸರ್ಕಾರಿ ಅಧಿಕಾರಿಗಳ ಮುಷ್ಕರಕ್ಕೆ ಹೆದರಿ ಸಭೆ ಕರೆದು ಶೇ.17 ಸಂಬಳ ಹೆಚ್ಚಳ ಮಾಡಿರುವ ಮುಖ್ಯಮಂತ್ರಿಗಳೇ, ಬಡವರ ಅಡುಗೆ ಅನಿಲ 50 ರೂ. ಏರಿಕೆ ಮಾಡಿ ಆ ಹಣದಲ್ಲಿ ಸರ್ಕಾರಿ ಅಧಿಕಾರಿಗಳ ಸಂಬಳ ನೀಡುವ ಜತೆಗೆ ಕೋಟಿ ಕೋಟಿ ಲೂಟಿ ಮಾಡಲು ಮುಂದಾಗಿರುವುದು ನಾಚಿಕೆಗೇಡು. ಸರ್ಕಾರ ಕೂಡಲೇ ಅಡುಗೆ ಅನಿಲ ಬೆಲೆ ಇಳಿಕೆ ಮಾಡಿ ಕಾರ್ಮಿಕರ 4 ತಾಸು ಹೆಚ್ಚುವರಿ ಆದೇಶ ವಾಪಸ್ ಪಡೆಯಬೇಕೆಂದರು. ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಅಧಿಕಾರಿ ಮಂಡೇಲ, ನಿಮ್ಮ ಮನವಿಯನ್ನು ಗೌರವಾನ್ವಿತ ಪ್ರಧಾನ ಮಂತ್ರಿ ಗಳಿಗೆ ಕಳುಹಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕ ಲೇರಿ ಹನುಮಯ್ಯ, ಕದರಿನತ್ತ ಅಪ್ರೋಜಿ ರಾವ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಭೀಮಗಾನಹಳ್ಳಿ ಮುನಿ ರಾಜು, ವಿಶ್ವ, ಸಂದೀಪ್‌ರೆಡ್ಡಿ, ಸಂದೀಪ್ ಗೌಡ, ಕಿರಣ್, ರಾಮಸಾಗರ ವೇಣು, ಚಾಂದ್ಪಾಷ ಬಾಬಾಜಾನ್, ಆರೀಫ್, ಜಾವೀದ್, ಮಹ್ಮದ್ ಷೋಹಿಬ್, ಯಲ್ಲಣ್ಣ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಹರೀಶ್, ಮಾಸ್ತಿ ವೆಂಕಟೇಶ್, ಐತಾಂಡ ಹಳ್ಳಿ ಮುನ್ನ, ಮುನಿಯಪ್ಪ ಇದ್ದರು.