Advertisement

ಚೀನ ಗ್ರಾಮ ನಿರ್ಮಾಣದ ವಿರುದ್ಧ ಪ್ರತಿಭಟನೆ

12:57 AM Jan 22, 2021 | Team Udayavani |

ಬೀಜಿಂಗ್‌/ಇಟಾನಗರ: ಅರುಣಾಚಲ ಪ್ರದೇಶಕ್ಕೆ ಹೊಂದಿ ಕೊಂಡು ಇರುವ ಪ್ರದೇಶದಲ್ಲಿ ಚೀನ ಗ್ರಾಮ ನಿರ್ಮಿಸಿದ್ದನ್ನು ಖಂಡಿಸಿ ಸುಧಾನ್ಸಿರಿ ಜಿಲ್ಲೆಯಲ್ಲಿ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದ್ದಾರೆ.

Advertisement

ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌, ಅಲ್ಲಿನ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ. ಭಾರತ ಪರ ಘೋಷಣೆಗಳನ್ನು ಕೂಗಿದ್ದಾರೆ. ಜತೆಗೆ ಚೀನ ಭಾರತದ ನೆಲದಲ್ಲಿ ನಡೆಸುತ್ತಿರುವ ನಿರ್ಮಾಣ ಚಟುವಟಿಕೆಗಳನ್ನು ಉಗ್ರ ವಾಗಿ ಖಂಡಿಸಿದರಲ್ಲದೆ ಚೀನ ಅಧ್ಯಕ್ಷರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಲ್‌ ತಾಗಿನ್‌ ಯೂತ್‌ ಆರ್ಗನೈಸೇಶನ್‌, ಆಲ್‌ ಗಿಬಾ ಸರ್ಕಲ್‌ ವಿಜಿಲೆನ್ಸ್‌ ಫೋರಂ, ನ್ಯೂ ಮಾರ್ಕೆಟ್‌ ವೆಲ್ಫೆàರ್‌ ಅಸೋಸಿ ಯೇಶನ್‌ ಸೇರಿದಂತೆ ಹಲವಾರು ಸಂಘಟನೆಗಳ ಸದಸ್ಯರು ಮತ್ತು ಸ್ಥಳೀಯರು “ಭಾರತ್‌ ಮಾತಾ ಕಿ ಜೈ’, “ವಿ ಆರ್‌ ಇಂಡಿಯನ್ಸ್‌’, “ಚೀನ ಗೋ ಬ್ಯಾಕ್‌’ ಎಂಬ ಘೋಷಣೆಗಳನ್ನು ಕೂಗಿದರು. ಕೇಂದ್ರ ಸರಕಾರ ಚೀನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ನಮ್ಮ ಪ್ರದೇಶ: ಹೊಸ ಗ್ರಾಮದ ನಿರ್ಮಾಣದ ಬಗ್ಗೆ ಚೀನ ಸರಕಾರ ಸ್ಪಷ್ಟನೆ ನೀಡಿದ್ದು, “ನಮ್ಮ ವ್ಯಾಪ್ತಿಯ ಪ್ರದೇಶದಲ್ಲಿಯೇ ಗ್ರಾಮ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ಯಾವುದೇ ಸಂಶಯ ಬೇಡ’ ಎಂದು ಪ್ರತಿಕ್ರಿಯೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next