Advertisement

ಕನಿಷ್ಠ ಮಟ್ಟಕ್ಕಿಳಿದ ತೀವ್ರ ಬಡತನ: ಎಸ್‌ಬಿಐ ವರದಿ

07:06 PM Jan 03, 2025 | Team Udayavani |

ನವದೆಹಲಿ: 2024ರಲ್ಲಿ ಭಾರತದ ಬಡತನ ದರವು ಕಡಿಮೆಯಾಗಿದ್ದು, ಶೇ.5ಕ್ಕಿಂತ ಕೆಳಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ವರದಿ ಹೇಳಿದೆ.

Advertisement

ಅಲ್ಲದೆ, ಕಡು ಬಡತನ ಕೂಡ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದೂ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಬಡತನ ಸರಾಸರಿಯು ಶೇ. 4ರಿಂದ 4.5ರ ನಡುವೆ ಇದೆ. ಒಂದು ವರ್ಷದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡನತ ನಿವಾರಣೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ.

2024ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.4.86ರಷ್ಟು ಬಡತನವಿದೆ. ಕಳೆದ ವರ್ಷ ಇದು ಶೇ.7.2ರಷ್ಟಿತ್ತು. ಅದೇ ರೀತಿ, ನಗರ ಪ್ರದೇಶದಲ್ಲಿ ಬಡತನದಲ್ಲಿ ಶೇ.4.09ರಷ್ಟು ಕುಸಿತವಾಗಿದೆ. ಕಳೆದ ವರ್ಷ ಇದು ಶೇ.4.6ರಷ್ಟಿತ್ತು. 2012ರಲ್ಲಿ ಈ ಪ್ರಮಾಣ ಶೇ.13.7ರಷ್ಟಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next