ಯಳಂದೂರು: ರೈತರಿಗೆ ಸೆಸ್ಕ್ನಿಂದಾಗುತ್ತಿರುವ ತೊಂದರೆಗಳ ವಿರುದ್ಧ ರೈತ ಸಂಘದ ಸದಸ್ಯರು ಶುಕ್ರವಾರ ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ವಿದ್ಯುತ್ ಪರಿವರ್ತಕಗಳನ್ನು ನಿಗದಿತಅವಧಿಯೊಳಗೆ ದುರಸ್ತಿ ಮಾಡಬೇಕೆಂಬ ನಿಯಮವಿದ್ದರೂ ಇದನ್ನು ಗಾಳಿಗೆ ತೂರಲಾಗಿದೆ. ವಿದ್ಯುತ್ ಪರಿವರ್ತಕ ಅಳವಡಿಸಲು ಲಂಚವನ್ನುಸೆಸ್ಕ್ನ ನೌಕರರು ಕೇಳುತ್ತಾರೆ. ರೈತರೊಂದಿಗೆ ಇಲ್ಲಿನಜೆಇ ಅಸಭ್ಯವಾಗಿ ವರ್ತಿಸುತ್ತಾರೆ. ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಕೇಳಿದರೆ ಉಡಾಫೆಉತ್ತರ ನೀಡುತ್ತಾರೆ ಎಂದು ದೂರಿದರು.
ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ನೀಡಬೇಕೆಂಬ ನಿಯಮ ಪಾಲನೆಯಾಗುತ್ತಿಲ್ಲ. ಈಗ ಬೇಸಿಗೆಯಾಗಿದ್ದು ರೈತರ ಫಸಲುಗಳುಒಣಗುತ್ತಿವೆ. ಇಂತಹ ಸಂದರ್ಭದಲ್ಲಿ ಕನಿಷ್ಠ 10 ಗಂಟೆಯಾದರೂ 3 ಫೇಸ್ ವಿದ್ಯುತ್ ನೀಡಬೇಕು. ರಾತ್ರಿ ವೇಳೆ ರೈತರು ತಮ್ಮ ಬೆಳೆಗಳನ್ನು ಕಾಯಲುಜಮೀನುಗಳಿಗೆ ತೆರಳುತ್ತಾರೆ. ಆದರೆ, ರಾತ್ರಿ ಹೊತ್ತ ಸಿಂಗಲ್ ಫೇಸ್ ವಿದ್ಯುತ್ ಕೂಡ ನೀಡುತ್ತಿಲ್ಲ. ಇದರಿಂದ ಕಗ್ಗತ್ತಲಿನಲ್ಲೇ ಕಾಡುಪ್ರಾಣಿಗಳ ಜೀವಭಯದಿಂದ ರೈತರು ಕಾಲ ಕಳೆಯುವ ಪರಿಸ್ಥಿತಿಇದೆ. ಇದು ನಿಲ್ಲಬೇಕು, ರಾತ್ರಿವೇಳೆ ನಿರಂತವಾಗಿ ಐಸಿ ಸೆಟ್‌ಗಳಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದರು.
ಜಮೀನುಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಕೆಲವೆಡೆ ಡೊಳ್ಳಾಗಿವೆ. ಗಾಳಿಗೆ ಇದು ಪರಸ್ಪರ ತಗುಲಿದರೆ ಇದರಿಂದ ವಿದ್ಯುತ್ ಕಿಡಿಗಳುಪ್ರವಹಿಸಿ ಕಬ್ಬು ಸೇರಿದಂತೆ ಅನೇಕ ಬೆಳೆಗಳು ನಷ್ಟವಾಗುತ್ತಿದೆ. ಇದನ್ನು ಬೇರೆಡೆ ಬದಲಿಸಬೇಕು. ಇಲ್ಲವೆ ತಂತಿಗಳನ್ನು ಬಿಗಿಗೊಳಿಸಬೇಕು. ವಿದ್ಯುತ್‌ಶಾರ್ಟ್ ಸರ್ಕಿಟ್‌ನಿಂದ ಬೆಳೆನಷ್ಟವಾಗಿದ್ದು ಇದಕ್ಕೆಹಲವು ತಿಂಗಳು ಕಳೆದರೂ ಇನ್ನೂ ನಷ್ಟವನ್ನುತುಂಬಿಕೊಟ್ಟಿಲ್ಲ. ಇದರಿಂದ ರೈತರಿಗೆ ಸಂಕಷ್ಟವಾಗಿದ್ದುಆದಷ್ಟು ಬೇಗ ಪರಿಹಾರ ಮೊತ್ತವನ್ನು ನೀಡಬೇಕು ಎಂದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ರೈತರು ಕಚೇರಿ ಮುಂಭಾಗ ಧಿಕ್ಕಾರ ಕೂಗಿಪ್ರತಿಭಟಿಸಿದರು. ನಂತರ ಸೆಸ್ಕ್ನ ಎಇಇ ನಿಂಗರಾಜುಗೆ ಮನವಿ ಸಲ್ಲಿಸಲಾಯಿತು.ಹೊನ್ನೂರು ಬಸವಣ್ಣ, ಅಂಬಳೆ ಶಿವಕುಮಾರ್,ಸಿದ್ದಲಿಂಗಸ್ವಾಮಿ, ಬಿ.ಜಿ. ಮಹೇಶ್,ಮಹದೇವಸ್ವಾಮಿ ಋಷಿ, ನಾಗರಾಜು, ಶಂಕರ್, ದೀಪು, ಲೋಕೇಶ್, ಕಾಂತರಾಜು, ಕುಮಾರ್, ಶಂಕರ್, ಮನು ಇತರರಿದ್ದರು.