Advertisement

ಮುಖಕ್ಕೆ ‘ನೋ ಸಿಎಎ, ನೋ ಎನ್ ಆರ್ ಸಿ’ಮಾಸ್ಕ್ ಧರಿಸಿ ಪ್ರತಿಭಟನೆ

09:51 AM Jan 17, 2020 | keerthan |

ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆ ವಿರೋಧಿಸಿ ಕಲಬುರಗಿ ನಗರದಲ್ಲಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ಮುಖಕ್ಕೆ ‘ನೋ ಸಿಎಎ, ನೋ ಎನ್ ಆರ್ ಸಿ’ ಎಂಬ ಬರಹವುಳ್ಳ ಮಾಸ್ಕ್ ಧರಿಸಿ, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ‌ಕಚೇರಿಯವರೆಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜೊತೆಗೆ ಕೈಯಲ್ಲಿ ತಿರಂಗ ಧ್ವಜ ಹಿಡಿದು ‘ಹಿಂದೂ‌ ಹೈ ಹಮ್’ ಎಂಬ ಘೋಷಣೆ ಕೂಗುತ್ತಾ, ಸಿಎಎ ಹಾಗೂ ಎನ್ ಆರ್ ಸಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next