Advertisement

ಅಮರನಾಥ ಹತ್ಯಾಕಾಂಡ ಖಂಡಿಸಿ ಪ್ರತಿಭಟನೆ

03:19 PM Jul 12, 2017 | |

ವಿಜಯಪುರ: ಅಮರನಾಥ ಯಾತ್ರಿಕರ ಮೇಲೆ ಉಗ್ರರು ನಡೆಸಿರುವ ಪೈಶಾಚಿಕ ದಾಳಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ
ಎದುರು ಪ್ರತಿಭಟನೆ ನಡೆಸಿದ ವಿಎಚ್‌ಪಿ ಹಾಗೂ ಭಜರಂಗ ದಳ ಕಾರ್ಯಕರ್ತರು ಹತ್ಯೆ ನಡೆಸಿದ ಉಗ್ರರನ್ನು ಗಲ್ಲಿಗೇರಿಸುವಂತೆ
ಆಗ್ರಹಿಸಿದರು.

Advertisement

ಈ ವೇಳೆ ಮಾತನಾಡಿದ ಸಂಘಟನೆ ಪ್ರಮುಖ ಸುನೀಲ ಭೈರೋಡಗಿ, ಪವಿತ್ರ ಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಉಗ್ರರ ದುಷ್ಕೃತ್ಯ ಅತ್ಯಂತ ಅಮಾನವೀಯ ಹಾಗೂ ಖಂಡನಾರ್ಹ. ದೇಶದಲ್ಲಿ ಹೆಚ್ಚುತ್ತಿರುವ ಉಗ್ರರ
ಉಪಟಳ, ರಾಕ್ಷಸಿ ಕೃತ್ಯಗಳಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು. ಉಗ್ರ ಎಲ್ಲ ಸಂಘಟನೆ ಹಾಗೂ ನಾಯಕರನ್ನು ಮಟ್ಟ ಹಾಕಬೇಕು.
ಘಟನೆಯಲ್ಲಿ ಪ್ರಾಣ ಕಳೆದುಕೊಂಡಿರುವ ಯಾತ್ರಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಅಮರನಾಥ ಸ್ಥಳವನ್ನು
ಸಂಪೂರ್ಣ ಸೇನೆಯ ನಿಯಂತ್ರಣಕ್ಕೆ ನೀಡಬೇಕು ಎಂದು ಆಗ್ರಹಿಸಿದರು. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳರ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಕಾರಣ ಈ ವರೆಗೆ ಆರೋಪಿಗಳ ಬಂಧನವಾಗಿಲ್ಲ. ಮತ್ತೂಂದೆಡೆ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಇಬ್ಬಗೆ ನೀತಿ
ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ತಿಂಗಳ ಅವ ಧಿಯಲ್ಲಿ ಹಿಂದೂ ಸಂಘಟನೆಗಳ 24 ಹೆಚ್ಚು ಕಾರ್ಯಕರ್ತರ 
ಹತ್ಯೆಯಾಗಿದೆ. ಇದೀಗ ಶರತ್‌ ಹತ್ಯೆ ನಡೆದಿದೆ. ಇಷ್ಟಾದರೂ ರಾಜ್ಯ ಸರ್ಕಾರ ನಿರ್ಲಕ್ಷ ತೋರುತ್ತಿದೆ ಎಂದು ಕಿಡಿ ಕಾರಿದರು. 

ಸಂಘಟನೆಗಳ ಪ್ರಮುಖರಾದ ಪ್ರವೀಣ ಹೌದೆ, ಈರಣ್ಣ ಹಳ್ಳಿ, ಸಮೀರ ಚಿಪ್ಪಲಕಟ್ಟಿ, ಸಂತೋಷ ಹಿರೇಮಠ, ಗಣೇಶ  ಜೇವೂರ, ಅಜಯ ಗಂಗಾವತಿ, ಗಣೇಶ ಉಪ್ಪಾರ, ಮುತ್ತು ಪೂಜಾರಿ, ಪ್ರೇಮ ಗೌಡೇಶ, ಸಂಜೀವ ಕಾಂಬಳೆ, ಮಯೂರ ಮುರಗಾಂವಕರ, ಶ್ರೀಕಾಂತ ಸುಲಗುಂದ, ರಮೇಶ ಸಿದ್ದನಾಥ, ಶಿವಾಜಿ ಮೋರೆ, ಗುರು ಹತಂಗಳೆ, ರಾಯನಗೌಡ ಪಾಟೀಲ, ಸದಾಶಿವ ಹವಾಲ್ದಾರ್‌, ಸತೀಶ ನಿಂಗನೂರ, ದಿನೇಶ ಪವಾರ, ಆಕಾಶ ಕೋರಿ, ಕಿರಣ ಕುಂಡೇಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next