Advertisement
ಅವರು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಮಹಾಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಸೇವೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಕ್ರಿಮಿನಲ್‌ಗಳ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌ನ ಅಸಲಿ ಮುಖ ರಾಜ್ಯದ ಜನತೆಗೆ ತಿಳಿದಿದೆ. ಸಮ್ಮಿಶ್ರ ಸರಕಾರದ ಶಾಸಕ ರನ್ನು ಸೆಳೆಯು ವಂತಹ ಯಾವುದೇ ಪ್ರಯತ್ನ ವನ್ನು ಬಿಜೆಪಿ ನಡೆಸು ತ್ತಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಪಕ್ಷಗಳ ಶಾಸಕರು ಗುಂಪು ಗಾರಿಕೆ ಯಿಂದ ಚದುರಿ ಹೋಗಿದ್ದಾರೆ. ಸರಕಾರ ಬೀಳುವ ಭಯದಿಂದ ಅಲ್ಲಿನ ನಾಯಕರು ಬಿಜೆಪಿಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು. ಅಸಮಾಧಾನ ಭುಗಿಲು
ಶೀಘ್ರ ಲೋಕಸಭಾ ಚುನಾವಣೆ ನಡೆಯಲಿ ರುವುದರಿಂದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ಗಲಾಟೆ ಮಾಡಿದ್ದಾರೆ. ಅವರೊಳಗೆ ಅಸಮಾಧಾನ ಒಳಗೆ ಭುಗಿಲೆದ್ದಿದ್ದು, ಮುಖ್ಯ ಮಂತ್ರಿ ರಾಜೀನಾಮೆ ನೀಡು ವುದಾಗಿ ಹೇಳುತ್ತಿ ದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರಕಾರ ಉಳಿಯು ವುದು ಕಷ್ಟ. ಸರಕಾರ ತಾನಾಗಿ ಬಿದ್ದರೆ ನಮಗೆ ಅವಕಾಶ ಕೊಡಿ ಎನ್ನುವುದರಲ್ಲಿ ತಪ್ಪೇನಿದೆ ಎಂದು ರಾಮುಲು ಪ್ರಶ್ನಿಸಿದರು.ಬಿಜೆಪಿ ಯುವ ಮುಖಂಡ ಶ್ರೀಕುಮಾರ, ದಿನೇಶ್ ಕರ್ಕೇರ, ಸುರೇಶ್ ಪೂಜಾರಿ, ರಾಜು ಉಪಸ್ಥಿತರಿದ್ದರು.