Advertisement

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ರಸ್ತಾವನೆ: ಸಚಿವ

07:07 PM Jan 05, 2021 | Team Udayavani |

ಕೋಲಾರ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು 750 ರೂ. ಕೋಟಿಗಳ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌ ತಿಳಿಸಿದರು. ಸೋಮವಾರ ಜಿಲ್ಲಾ ಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ 2021-22 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

Advertisement

ಮುಳಬಾಗಿಲು ನಗರಕ್ಕೆ ಒಳಚರಂಡಿ ಯೋಜನೆಗೆ ಪ್ರಸ್ತಾವನೆ ಹಾಗೂ ಸೋಮೇಶ್ವರ ದೇವಸ್ಥಾನ, ಅಂತರಗಂಗೆ,ಆವಣಿ, ಕುರುಡುಮಲೆ, ಕೋಟಿಲಿಂಗ, ಚಿಕ್ಕತಿರುಪತಿಮುಂತಾದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲುಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ ಅವರು,ಜಿಲ್ಲೆ ಅಂತರ ರಾಜ್ಯ ಗಡಿಯಲ್ಲಿರುವುದರಿಂದ ಕೋಲಾರದಲ್ಲಿಹೈಟೆಕ್‌ ಬಸ್‌ನಿಲ್ದಾಣ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಸುಸಜ್ಜಿತ ಹೋಟೆಲ್‌ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಕೋಲಾರಕ್ಕೆ ಹೊಸ ಐ.ಬಿ.ಪರಿವೀಕ್ಷಣಾ ಮಂದಿರ ಅಗತ್ಯವಿದ್ದು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ.ನಂಜೇಗೌಡ ಮಾತನಾಡಿ, 22 ಎಕರೆ ಜಾಗದಲ್ಲಿ 1200 ಬಡವರಿಗೆ ಉಚಿತ ನಿವೇಶನ ನೀಡಲು ಲೇಔಟ್‌ ಅಭಿವೃದ್ಧಿ ಪಡಿಸಲು 20 ಕೋಟಿ ರೂ., ಮಾಲೂರು ಕೆರೆಗೆ 23.85 ರೂ. ಪ್ರಸ್ತಾವನೆ ನೀಡಿದರು. ಮಾಲೂರಿನ ಸಮಗ್ರಅಭಿವೃದ್ಧಿಗಾಗಿ 30 ಕೋಟಿ ರೂ.ಗಳ ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆ ಸಲ್ಲಿಸಿದರು. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ನೆನಪಿನ ಅಧ್ಯಯನ ಕೇಂದ್ರವನ್ನು ಮಾಲೂರಿನಲ್ಲಿರುವ ಅವರ ಸ್ವಂತ ಗ್ರಾಮ ಮಾಸ್ತಿಯಲ್ಲಿ ಸ್ಥಾಪಿಸಲು ಸಲಹೆ ನೀಡಿದರು.

ಡಿಎಚ್‌ಒ-ಶಾಸಕಿ ಮಾತಿನ ಚಕಮಕಿ: ಕೋವಿಡ್ ವೇಳೆ ಕೆಜಿಎಫ್‌ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದು ಕೊಂಡವರಿಗೆ, ಡಿ ಗ್ರೂಪ್‌ ನೌಕರರಿಗೆ 4-5 ತಿಂಗಳಿನಿಂದ ಸಂಬಳ ನೀಡಿಲ್ಲ, ಪಿಎಫ್‌, ಇಎಸ್‌ಐ ಹಾಕುತ್ತಿಲ್ಲ, ಮಾಸಿಕ12,000 ರೂ. ವೇತನ ನೀಡಬೇಕಾದ ಕಡೆ 8000 ರೂ, ನೀಡುತ್ತಾರೆ ಎಂದು ಶಾಸಕಿ ರೂಪಕಲಾ ಶಶಿಧರ್‌ ಆರೋಪಿಸಿ ಡಿಎಚ್‌ಒ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಳಬರಿಗೆ ಗುತ್ತಿಗೆ ಅವಧಿ ಮುಗಿದಿದ್ದರೂ ಮುಂದುವರಿಸಿದ್ದಾರೆ. ಬದಲಾಯಿಸಲು ಹೇಳಿದ್ದರೂ ಸ್ಪಂದಿಸದೆ ಬೇಜವಾಬ್ದಾರಿತನ ತೋರಿಸುತ್ತಾರೆ ಎಂದು ಡಿಎಚ್‌ಒ ಡಾ.ಎಸ್‌.ಎನ್‌.ವಿಜಯಕುಮಾರ್‌ರನ್ನು ತರಾಟೆಗೆ ತೆಗೆದುಕೊಂಡರು. ಕೆಜಿಎಫ್‌ ಆಸ್ಪತ್ರೆ ಜಿಲ್ಲಾ ಸರ್ಜನ್‌ಶಿವಕುಮಾರ್‌ ಸಭೆಗೆ ಬರುತ್ತಿದ್ದಂತೆಯೇ ಉತ್ತರಿಸಿದ ಜಿಲ್ಲಾಸರ್ಜನ್‌, ಕಳೆದ ಮಾರ್ಚ್‌ನಲ್ಲಿ ಗುತ್ತಿಗ ಅವಧಿ ಮುಗಿದಿತ್ತು.ಕಡತವನ್ನು ಡಿಸಿಯವರ ಆಪ್ತ ಸಹಾಯಕರ ಬಳಿ ಕೊಟ್ಟಿದ್ದೆ,2-3 ಮಂದಿ ಆಪ್ತ ಸಹಾಯಕರು ಬದಲಾಗಿದ್ದಾರೆ. ಕಡತ ಮಿಸ್‌ ಆಗಿರಬಹುದು ಎಂದು ಸಮಜಾಯಿಷಿ ನೀಡಿದರು.ಶಾಸಕಿಯ ಬೆಂಬಲಕ್ಕೆ ನಿಂತ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು, ನಿಮ್ಮ ಪಿಎಗೆ ಬಹಳ ಬೇಜವಾಬ್ದಾರಿ. ತನ್ನ 3 ಕಡತ ಬಾಕಿ ಇದೆ. ಅವರನ್ನು ಸಸ್ಪೆಂಡ್‌ ಮಾಡಿ ಎಂದುಆಕ್ರೋಶಭರಿತರಾಗಿ ನುಡಿದಾಗ ಕಡತ ವಿಲೇವಾರಿಗೆ ತಡವಾಗಲು ಏನು ಕಾರಣ ಎಂದು ಈ ವೇಳೆ ಹೇಳಬೇಕಾ?ಇದು ವೇದಿಕೆ ಅಲ್ಲ ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿರುಗೇಟು ನೀಡಿದರು.

ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌, ಸಮಸ್ಯೆ ಬಗ್ಗೆ ಎಂದಾದರೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೀರಾ, ತಂದಿದ್ದರೆ ಇಷ್ಟು ರಾಮಾಯಣ ಆಗುತ್ತಿರಲಿಲ್ಲ ಎಂದರು.

ಕೋಲಾರ ಮತ್ತು ಕೆಜಿಎಫ್‌ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರಿಗೆ ವೇತನ ಪಾವತಿ ಸಂಬಂಧ ಪರಿಶೀಲನೆ ನಡೆಸಿ 2-3ದಿನಗಳಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಸತ್ಯಭಾಮ ಅವರು ಜಿಪಂ ಸಿಇಒ ಎನ್‌.ಎಂ.ನಾಗರಾಜ್‌ ರಿಗೆ ಸೂಚಿಸಿದರು. ಸಭೆಯಲ್ಲಿ ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಉಪ ವಿಭಾಗಾಧಿಕಾರಿ ಸೋಮಶೇಖರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next