Advertisement
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಾಚೇನಹಳ್ಳಿ ನಿದಿಗೆ ಕೈಗಾರಿಕಾ ಪ್ರದೇಶದ ಒಟ್ಟು 800 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ರಚನೆಯಿಂದ ಈ ಭಾಗದ ಕೈಗಾರಿಕೆಗಳ ಬೆಳವಣೆಗೆಗೆ ಉತ್ತೇಜನ ದೊರೆಯಲಿದೆ. ಈ ಕುರಿತು ಪ್ರಸ್ತಾವನೆ ಪೌರಾಡಳಿತ ಇಲಾಖೆಗೆ ಸಲ್ಲಿಸುವ ಮೂಲಕ ಆದಷ್ಟು ಬೇಗನೆ ಟೌನ್‌ಶಿಪ್ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನು ಹಸ್ತಾಂತರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಉಪವಿಭಾಗಾಧಿಕಾರಿ ಅವರಿಗೆ ಸೂಚಿಸಿದರು. ಸಿದ್ಲಿಪುರ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಸಾಗರ ರಸ್ತೆಯಿಂದ ಮುಖ್ಯ ರಸ್ತೆ ಅಭಿವೃದ್ಧಿಪಡಿಸಲು ಸ್ವಾಧೀನಪಡಿಸಿಕೊಳ್ಳಬಹುದಾದ ಭೂಮಿ ಗುರುತಿಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳಿಗೆ ತಿಳಿಸಿದರು.
Related Articles
Advertisement
ಇಲ್ಲಿ ಘನ ತ್ಯಾಜ್ಯ ಸೂಕ್ತ ವಿಲೇವಾರಿಗೆ 10 ಎಕರೆ ಜಮೀನು ಒದಗಿಸಲು ಈ ಹಿಂದೆ ಅನುಮೋದನೆ ನೀಡಲಾಗಿದ್ದು, ಇನ್ನೂ ಜಮೀನು ಹಸ್ತಾಂತರಿಸಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಕಾಲುದಾರಿ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಭದ್ರಾವತಿ ನಗರ ಸಭೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಪಂ ಸಿಇಒ ಶಿವರಾಮೇಗೌಡ, ಶಿವಮೊಗ್ಗ ಉಪ ವಿಭಾಗಾ ಧಿಕಾರಿ ಪ್ರಕಾಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್. ಗಣೇಶ್, ಉಪ ನಿರ್ದೇಶಕ ಶಿವಪ್ರಸಾದ್, ಕೆಎಸ್‌ಎಸ್‌ಐಡಿಸಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶಿವಕುಮಾರ್, ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜೆ.ಆರ್. ವಾಸುದೇವ್ ಇತರರು ಉಪಸ್ಥಿತರಿದ್ದರು.