Advertisement

ಕಾಶ್ಮೀರದಲ್ಲಿ ಹೂಡಿಕೆಗೆ ಪ್ರಸ್ತಾವನೆ

11:39 PM Sep 14, 2019 | Lakshmi GovindaRaju |

ಚಿತ್ರದುರ್ಗ: ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಅಲ್ಲಿನ 370 ಎ ವಿಧಿಯನ್ನು ರದ್ದು ಮಾಡಿರುವುದರಿಂದ ಈಗ ಅಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು, ಆಸ್ತಿ ಖರೀ ದಿಸಬಹುದು. ಈ ನಿಟ್ಟಿನಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಯಿಂದ ಹೂಡಿಕೆ ಮಾಡಲು ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಅಲ್ಲಿ ಜಾಗ ಸಿಕ್ಕಿದರೆ ಕೆಎಸ್‌ಟಿಡಿಸಿ ಯಾತ್ರಿ ನಿವಾಸ ಹಾಗೂ ಮಾಹಿತಿ ಕೇಂದ್ರ ತೆರೆಯಲಾಗುವುದು ಎಂದು ಸಚಿವ ಸಿ.ಟಿ.ರವಿ ಪುನರುಚ್ಚರಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದಾಗಿ ಕಾಶ್ಮೀರದ ಜನರಿಗೆ ಹಾಗೂ ಅಲ್ಲಿಗೆ ಬರುವ ಬೇರೆ, ಬೇರೆ ರಾಜ್ಯದ ಜನರಿಗೆ ಕನ್ನಡ ಸಂಸ್ಕೃತಿಯ ಪರಿಚಯವಾಗುತ್ತದೆ. ಇನ್ನು ಕೇಂದ್ರವನ್ನು ನೋಡಿದ ಅಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ನಮ್ಮ ರಾಜ್ಯಕ್ಕೆ ಬರಬಹುದು. ಇದರಿಂದ ಪರಸ್ಪರ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವಾಗುತ್ತದೆ ಎಂದು ಮಾಹಿತಿ ನೀಡಿದರು.

ಗೌರಿಗದ್ದೆ ವಿನಯಕುಮಾರ ಅವಧೂತರು ಯಡಿಯೂರಪ್ಪ ಅವರ ಗಾದಿಗೆ ಆಪ್ತರಿಂದಲೇ ಕಂಟಕವಿದೆ ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ರವಿ, ಎಷ್ಟು ದಿನ ಅಧಿ ಕಾರದಲ್ಲಿರುತ್ತೇವೆ ಎನ್ನುವುದು ಮುಖ್ಯವಲ್ಲ. ಅ ಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು. ಯಾರ ಹಣೆಬರಹವನ್ನು ಯಾರೂ ನಿರ್ಧರಿಸುವುದಿಲ್ಲ. ಎಲ್ಲವನ್ನೂ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ ಎಂದರು.

ರಾಮಮಂದಿರ ಆದ್ಯತೆ ವಿಷಯ: ರಾಮಮಂದಿರ ನಿರ್ಮಾಣ ಬಿಜೆಪಿಯ ಆದ್ಯತೆಯ ವಿಷಯ. ರಾಮಮಂದಿರ ನಿರ್ಮಾಣ ವಿಚಾರದಲ್ಲಿರುವ ತೊಡಕನ್ನು ನಿವಾರಿಸುವ ತೀರ್ಪು ನ್ಯಾಯಾಲಯದಿಂದ ಬರುವ ವಿಶ್ವಾಸವಿದೆ. ಅದೇ ರೀತಿ ಆಕ್ರಮಣಕಾರಿ ವ್ಯಕ್ತಿತ್ವದ ಬಾಬರ್‌ನನ್ನು ವೈಭವೀಕರಿಸುವುದನ್ನು ದೇಶಭಕ್ತರು ಸಹಿಸುವುದಿಲ್ಲ ಎಂದರು.

ಡಿ.ಕೆ. ಶಿವಕುಮಾರ್‌ರನ್ನು ಕಸ್ಟಡಿಗೆ ಕೊಟ್ಟಿರುವುದು ನ್ಯಾಯಾಲಯವೇ ಹೊರತು ಬಿಜೆಪಿ ಅಲ್ಲ. ಕಾನೂನು ಮತ್ತು ನ್ಯಾಯಾಲಯಕ್ಕಿಂತ ಯಾರೂ ಅತೀತರಲ್ಲ.
-ಸಿ.ಟಿ.ರವಿ, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next