ರಾಮನಗರ: ನ್ಯಾಷನಲ್ ರೂರಲ್ ವುಮನ್ ಲೈವ್ಲಿವುಡ್ ಮಿಷನ್ (ಎನ್.ಎಲ್.ಆರ್.ಎಂ) ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಂದ ಆಸ್ತಿ ಅಳತೆ ಮಾಡಿಸುವ ಪೈಲೆಟ್ ಪ್ರಾಜೆಕ್ಟ್ ಯಶಸ್ವಿಯಾಗಿದ್ದು, ಇತರ ಜಿಲ್ಲೆಗಳಲ್ಲೂ ಅಳಡವಡಿಸಿಕೊಳ್ಳುವ ವಿಚಾರದಲ್ಲಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಶಯ ವ್ಯಕ್ತಪಡಿಸಿದರು.
ಆಸ್ತಿ ಅಳತೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರ ಜೊತೆ ತಾಲೂಕಿನ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಗುಪ್ಪ ಗ್ರಾಮದಲ್ಲಿ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಗ್ರಾಮೀಣ ಜೀವನೋಪಾಯ ಇಲಾಖೆ ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರು ಮನೆ ಇತ್ಯಾದಿ ಆಸ್ತಿ ಅಳತೆ, ತೆರಿಗೆ ಅಂದಾಜು ಮಾಡುವ ಪೈಲಟ್ ಯೋಜನೆ ಕೈಗೊಳ್ಳಲಾಗಿತ್ತು.
ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಸದೊಂದು ಜೀವನೋ ಪಾಯ ಕೈಗೊಳ್ಳಲು ಈ ಯೋಜನೆಯನ್ನು ಜಿಲ್ಲೆ ಯಲ್ಲಿ ಜಾರಿಗೊಳಿಸಲಾಗಿತ್ತು. ಮಹಿಳೆಯರಿಂದ ಆಸ್ತಿ ಅಳತೆ, ತೆರಿಗೆ ಅಂದಾಜಿಸುವ ಕೆಲಸ ತೃಪ್ತಿಕರವಾ ಗಿದೆ ಎಂದು ಸಚಿವರು ಶ್ಲಾ ಸಿದರು. ಜಿಲ್ಲೆಯ ಕಂಚುಗಾರನಹಳ್ಳಿ, ಲಕ್ಷ್ಮೀಪುರ, ಭೈರಮಂಗಲ ಮತ್ತು ಬನ್ನಿಕುಪ್ಪೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಹಿಳೆಯರು ಸರ್ವೇ ಕಾರ್ಯ ನಡೆಸುತ್ತಿದ್ದಾರೆ.
ಪ್ರತಿ ಮನೆಯ ಸರ್ವೇ ಕಾರ್ಯಕ್ಕೆ 50 ರೂ. ಶುಲ್ಕ ನಿಗದಿಯಾ ಗಿದೆ. ಈ ಪ್ರಯತ್ನ ಯಶಸ್ವಿಯಾಗಿದೆ. ಗ್ರಾಮೀಣಾಭಿವೃದಿಟಛಿ-ಪಂಚಾಯತ್ ರಾಜ್ ಸಚಿವಾಲಯದ ಜತೆ ಚರ್ಚಿಸಿ, ಈ ಯೋಜನೆ ಯನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸಭಾಷ್ಯ ಬರೆಯಲಾಗುವುದು ಎಂದರು. ಈ ಯೋಜನೆ ಜಾರಿಯಾದರೆ ಇನ್ನು ಮುಂದೆ ರಾಜ್ಯಾದ್ಯಂತ ಆಸ್ತಿಗಳ ಸರ್ವೇ, ತೆರಿಗೆ ಅಂದಾಜನ್ನು ಮಹಿಳೆಯರೇ ಮಾಡಲಿದ್ದಾರೆ.
ಜತೆಗೆ ಮುಂದೆ ಆಸ್ತಿ ತೆರಿಗೆಯನ್ನೂ ಮಹಿಳೆಯರೇ ಸಂಗ್ರಹಿಸಲಿದ್ದಾರೆ. ಮಹಿಳೆಯರು ಮಾಸಿಕ ತಲಾ 15ರಿಂದ 20 ಸಾವಿರ ರೂಪಾಯಿ ಆದಾಯಗಳಿಸಲು ಸಾಧ್ಯವಾಗಿದೆ ಎಂದರು. ಇದೇ ವೇಳೆ ಮಹಿಳೆಯರ ಜತೆ ಸಂವಾದ ನಡೆಸಿದರು. ಈ ವೇಳೆ ನೂತನ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರು ತಮ್ಮ ಅನು ಭವ ಹಂಚಿಕೊಂಡರು. ಅಭಿಯಾನದ ನಿರ್ದೇಶಕಿ ಡಾ.ಬಿ.ಆರ್.ಮಮತಾ ಮಾತನಾಡಿ, ಜಿಲ್ಲೆಯ ಕಂದಾಯ ಇಲಾಖೆ ಮೂಲಕ ಆಸ್ತಿ ಅಳತೆ ನಡೆಸುವ ಮಹಿಳೆ ಯರಿಗೆ ತಾಂತ್ರಿಕ ನೆರವು ನೀಡಿತ್ತು. ಸುಮಾರು 3,116 ಮನೆಗಳನ್ನು ಆಳತೆ ಮಾಡಿದ್ದಾರೆ.
ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರ ಪೈಕಿ 10ನೇ ತರಗತಿ ತೇರ್ಗಡೆಯಾಗಿರುವ ಕ್ರಿಯಾಶೀಲ ಮಹಿಳೆಯರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿದ ನಂತರ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿ ದರು. ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಪಂ ಸಿಇಒ ಇಕ್ರಂ, ಗ್ರಾಪಂ ಅಧ್ಯಕ್ಷ ನಂದಪ್ರಭಾ, ಕೆಡಿಪಿ ಸದಸ್ಯ ಎಂ.ರುದ್ರೇಶ್, ತಾಪಂ ಭದ್ರಯ್ಯ ಮುಂತಾದವರು ಹಾಜರಿದ್ದರು.