Advertisement

ಬೀಚ್‌ ಸ್ವಚ್ಛತೆಯೊಂದಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನ; ಜಿಲ್ಲಾಧಿಕಾರಿ

01:31 PM Jan 02, 2023 | Team Udayavani |

ಪಣಂಬೂರು: ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ ಈ ನಿಟ್ಟಿನಲ್ಲಿ ಬೀಚ್‌ಗಳ ಸ್ವಚ್ಛತೆ ಹಾಗೂ ಸೂಕ್ತ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ಎಂ.ಆರ್‌.ರವಿಕುಮಾರ್‌ ತಿಳಿಸಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕ್ರೆಡೈ ಮಂಗಳೂರು ಮತ್ತು ಶಕ್ತಿ ನಗರದ ಶಕ್ತಿ ಶಿಕ್ಷಣ ಸಮೂಹ ಸಂಸ್ಥೆಗಳ ಪಣಂಬೂರು ಬೀಚ್‌ನಲ್ಲಿ ಸ್ವಚ್ಛ ಸುಂದರ ಬೀಚ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಚ್ಛತಾ ಕಾರ್ಮಿಕರ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಉತ್ತಮ ಆರೋಗ್ಯ ನೀಡುವ ಸಲುವಾಗಿ ವೈದ್ಯಕೀಯ ತಪಾಸಣೆ ವ್ಯವಸ್ಥೆ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕ್ರೆಡೈ, ಮಂಗಳೂರು ಅಧ್ಯಕ್ಷ ಪುಷ್ಪರಾಜ್‌ ಜೈನ್‌, ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಸನಿಲ್‌, ಕೆಐಒಸಿಎಲ್‌ ಅಧಿಕಾರಿ ಮುರುಗೇಶ್‌, ಪಣಂಬೂರು ಬೀಚ್‌ ಟೂರಿಸಂ ಇದರ ಪಾಲುದಾರ ಲಕ್ಷ್ಮೀಶ ಭಂಡಾರಿ, ಡಾ|ರಾಜೇಶ್‌ ಹುಕ್ಕೇರಿ, ಶಕ್ತಿ ಶಿಕ್ಷಣ ಸಮೂಹ ಸಂಸ್ಥೆ ಗಳ ಆಡಳಿತಾಧಿಕಾರಿ ರಮೇಶ್‌, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್‌ ಬಿ.ಎನ್‌., ಉಪಾಧ್ಯಕ್ಷ ಭಾಸ್ಕರ್‌ ರೈ ಕಟ್ಟ,ಕಾರ್ಯ ಕಾರಿ ಸಮಿತಿ ಸದಸ್ಯರಾದ ರಾಜೇಶ್‌ ದಡ್ಡಂಗಡಿ, ಆರೀಫ್‌ ಪಡುಬಿದ್ರಿ, ಸುಖ್‌ ಪಾಲ್‌ ಪೊಳಲಿ, ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಕಾರ್ಯ ಕಾರಿ ಸಮಿತಿ ಸದಸ್ಯ ಪಿ.ಬಿ.ಹರೀಶ್‌ ರೈ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ, ಇನ್ನರ್‌ ವೀಲ್‌ ಮಂಗಳೂರು ನಾರ್ತ್‌ನ ಅಧ್ಯಕ್ಷೆ ವಸಂತಿ ಕಾಮತ್‌, ಕಾರ್ಯದರ್ಶಿ ಗೀತಾ ರೈ, ಶಕ್ತಿ ಶಾಲೆಯ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಕ್ರಮದ ಎಚ್ಚರಿಕೆ
ಆಹಾರ ಮಳಿಗೆ ಮಾಲಕರು, ನೌಕರರಿಗೆ ಜಿಲ್ಲಾಧಿಕಾರಿ ಸ್ವಚ್ಚತೆಯ ಕ್ಲಾಸ್‌ ತೆಗೆದು ಕೊಂಡರು. ಮಳಿಗೆ ಬಳಿಗೆ ತೆರಳಿ ಗ್ರಾಹಕರು ಆಹಾರ ತಿಂದು ಅಲಲ್ಲಿ ಪೊಟ್ಟಣ ಬಿಸಾಡಿದರೆ ಏನು ಮಾಡುವಿರಿ, ನಿಮ್ಮ ತರಕಾರಿ ತ್ಯಾಜ್ಯ ಎಲ್ಲಿ ಬಿಸಾಡುವಿರಿ ಎಂದು ಪ್ರಶ್ನಿಸಿದರಲ್ಲದೆ, ಪ್ರವಾಸಿಗರಿಗೆ ಶುಚಿತ್ವ ಅರಿವು ಮೂಡಿಸುವ ಕೆಲಸ ನಿಮ್ಮಿಂದಾಗಬೇಕೆಂದರು. ಮಳಿಗೆ ಸುತ್ತಮುತ್ತ ಶುಚಿತ್ವ ಕಾಪಾಡುವ ಹೊಣೆಗಾರಿಕೆ ವಹಿಸದೆ ವ್ಯವಸ್ಥೆಯಿಲ್ಲ, ಮಾಡಿಕೊಟ್ಟಿಲ್ಲ ಎಂದು ದೂರಿದ ಅಂಗಡಿ ಮಾಲಕರಿಗೊಬ್ಬರಿಗೆ ಕ್ಲಾಸ್‌ ತೆಗೆದುಕೊಂಡರಲ್ಲದೆ ನೀವಾಗಿ ಜವಾಬ್ದಾರಿ ಮೆರೆಯಬೇಕೆಂದು ಸಲಹೆ ನೀಡಿದರು. ಸರಿಯಾಗಿ ಶುಚಿತ್ವ ಕಾಪಾಡಿ ಕೊಳ್ಳದಿದ್ದರೆ ಮಾಲಿನ್ಯ ನಿಯಂತ್ರಣ ವಿಭಾಗದ ಅಧಿಕಾರಿಗಳು ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಇದಕ್ಕೆ ಆಸ್ಪದ ಕೊಡಬೇಡಿ ಎಂದು ಎಚ್ಚರಿಸಿದರು.

Advertisement

ಸಾಂಸ್ಕೃತಿಕ ಪರಂಪರೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶ ಹಾಗೂ ನದಿ,ಕಡಲ ತೀರವನ್ನು ಹೊಂದಿದೆ. ತುಳುನಾಡಿನ ಸಮೃದ್ಧವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಜಿಲ್ಲೆಯ ಬೀಚ್‌ಗಳು ಹಾಗೂ ಇಲ್ಲಿನ ಪ್ರವಾಸಿ ತಾಣಗಳಿಗೆ ದೇಶ ವಿದೇಶದಿಂದ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದುದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಷ್ಟು ಹೂಡಿಕೆಗೆ ಸರಕಾರ ಅವಕಾಶ ಕಲ್ಪಿಸುತ್ತಿದೆ. ಈ ನಿಟ್ಟಿನಲ್ಲಿ ಬೀಚ್‌ ಗಳ ಸತ್ಛತೆಗಾಗಿ ಸಾಮೂಹಿಕ ಸಹಭಾಗಿತ್ವದಲ್ಲಿ ಸಂಘವು ತೊಡಗಿಸಿ ಕೊಂಡಿರುವುದು ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next