Advertisement
ಪಟ್ಟಣದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಸೆ.15 ಮತ್ತು 16 ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಪದಾಧಿ ಕಾರಿಗಳ ಅಧ್ಯಯನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಅವರುಮಾತನಾಡಿದರು. ಹಲವು ಧರ್ಮಗಳ ಸಂಗಮವಾಗಿರುವುದರಿಂದಲೇ ಇಂದಿಗೂ ದೇಶದ ಐಕ್ಯತೆ ಜೀವಂತವಾಗಿದೆ. ಇದರ ಮಧ್ಯೆ ಕೆಲವು ಮನುವಾದಿಗಳು ತಮ್ಮ ಮನು ಧರ್ಮವನ್ನು ಬಲವಂತವಾಗಿ ಹೇರುವ ಪ್ರಯತ್ನ
ನಡೆಸುವ ಜತೆಗೆ ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಕೆಲ ಪ್ರಗತಿಪರ ಚಿಂತಕರನ್ನು ಹತ್ಯೆಗೈಯಲು ಪ್ರೇರಣೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಗತಿಪರರ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಕೈವಾಡವಿದೆ ಎನ್ನುವುದು ತನಿಖಾ ಸಂಸ್ಥೆಗಳಿಂದ ಗೊತ್ತಾಗಿದೆ ಎಂದರು.
ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಅರಳಸುರಳಿ ಅಧ್ಯಕ್ಷತೆ ವಹಿಸಿ, ಸೆ.15 ಮತ್ತು 16ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮಧ್ಯಪ್ರದೇಶದ ಎನ್‌ಎಪಿಎಂ ರಾಷ್ಟ್ರೀಯ ಸಂಚಾಲಕ ಡಾ| ಸನೀಲಂ ಉದ್ಘಾಟನೆ ನೆರವೇರಿಸಲಿದ್ದಾರೆ. ಟಿ. ನರಸೀಪುರ ನಳಂದ ಬುದ್ಧವಿಹಾರದ ಭಂತೆ ಬುದ್ಧ ರತ್ನ ಅವರು ಸಾನ್ನಿಧ್ಯ ವಹಿಸಲಿದ್ದು,
ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸೆ.15ರಂದು ನಡೆಯುವ ಶಿಬಿರದಲ್ಲಿ ಮತಾಂಧತೆಯ ವಿರುದ್ಧ ಶೋಷಿತ ಸಮುದಾಯಗಳ ಏಕತೆ ಮತ್ತು ಸಂಘಟನೆ,
ಡಾ.ಅಂಬೇಡ್ಕರ್ ದೃಷ್ಟಿ ಕೋನದಲ್ಲಿ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ನಡೆ ಹಾಗೂ ಸೆ.16ರಂದು ಶೋಷಿತರ ವಿಮೋಚನೆ-ಭೂಮಿ, ವಸತಿ, ಮೀಸಲಾತಿ ಹಾಗೂ ಇಂದಿನ ರಾಜಕೀಯ ಪರಿಸ್ಥಿತಿ-ಗಾಂ ಧಿ, ಅಂಬೇಡ್ಕರ್, ಲೋಹಿಯಾ ಪ್ರಸ್ತುತತೆ ವಿಷಯ ಹಾಗೂ ದಲಿತ ಸಮುದಾಯದ ಅಭಿವೃದ್ಧಿ ಬಗ್ಗೆ ಚಿಂತನ ಮಂಥನ ನಡೆಯಲಿದೆ ಎಂದು ಮಾಹಿತಿ ನೀಡಿದರು.
Related Articles
Advertisement