Advertisement

ಪ್ರಗತಿಗೆ ಸಾಮೂಹಿಕ ಪ್ರಯತ್ನ ಅಗತ್ಯ

12:07 PM Sep 18, 2017 | Team Udayavani |

ಬಸವಕಲ್ಯಾಣ: ಹಿಂದುಳಿದ ಹೈ-ಕ ಭಾಗದ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

Advertisement

ನಗರದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಹೈ.ಕ. ವಿಮೋಚನಾ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯೋಗಾವಕಾಶ ಸೃಷ್ಟಿಸಲು ತಾಲೂಕಿನಲ್ಲಿ ಸರ್ಕಾರದಿಂದ 300 ಎಕರೆ ಭೂಮಿ ಸ್ವಾಧಿಧೀನ ಮಾಡಿಕೊಂಡು ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಮಾತನಾಡಿ, ಹೈದ್ರಬಾದ್‌
ಕರ್ನಾಟಕ ವಿಮೋಚನೆಗಾಗಿ ಹೋರಾಡಿ ಪ್ರಾಣ ಬಲಿದಾನ ನೀಡಿದ ದೇಶ ಭಕ್ತರ ಹೋರಾಟಗಾರರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ಮುಖಂಡ ಕೇಶಪ್ಪ ಬಿರಾದಾರ ಉಪನ್ಯಾಸ ನೀಡಿದರು. ನಗರಸಭೆ ಉಪಾಧ್ಯಕ್ಷೆ ಚಮ್ಮಾಬಾಯಿ ಮಾಲಗಾರ, ಸಿಪಿಐ
ಅಲಿಸಾಬ, ತಾಪಂ ಪ್ರಭಾರಿ ಇಒ ಶಂಕರ ಕನಕ ಇದ್ದರು. ತಹಶೀಲ್ದಾರ ಕೀರ್ತಿ ಸ್ವಾಗತಿಸಿದರು. ಪಶು ಸಂಗೋಪನಾ
ಇಲಾಖೆ ಸಹಾಯಕ ನಿರ್ದೇಶಕ ಡಾ| ರವೀಂದ್ರನಾಥ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಸನ್ಮಾನಿಸಲಾಯಿತು.

Advertisement

ಇದಕ್ಕೂ ಮೊದಲು ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹಳೆ ತಹಶೀಲ್ದಾರ ಕಚೇರಿ ವರೆಗೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next