Advertisement

ಅನ್ವೇಷಣಾ ಪ್ರವೃತ್ತಿಯಿಂದ ದೇಶದ ಪ್ರಗತಿ

12:08 PM Sep 09, 2018 | |

ಬೆಂಗಳೂರು: ಉತ್ತಮ ಶಿಕ್ಷಕರು ಸಂಪೂರ್ಣ ಬದ್ಧತೆ ಹಾಗೂ ಅನ್ವೇಷಣಾ ಪ್ರವೃತ್ತಿ ಹೊಂದಿದ್ದರೆ ದೇಶ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ. ಆದ್ದರಿಂದ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರು ತೊಡಗಿಸಿಕೊಳ್ಳಬೇಕು ಎಂದು ಉನ್ನತ  ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಕರೆ ನೀಡಿದರು.

Advertisement

ನಗರದಲ್ಲಿ ಬೆಂಗಳೂರು ಎಜುಕೇಷನ್‌ ಟ್ರಸ್ಟ್‌ ಅವರು ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಸ್ಮರಣಾರ್ಥ ಇತೀ¤ಚೆಗೆ ಹಮ್ಮಿಕೊಂಡಿದ್ದ  ‘ಗುರು ಬ್ರಹ್ಮ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವದ್ಯಾಲಯದ ಕುಲಾಧಿಪತಿ ಪ್ರೊ. ಎನ್‌.ಆರ್‌. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪ್ರಸಕ್ತ ಸಾಲಿನಿಂದ ಗುರುಬ್ರಹ್ಮ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿದೆ. ಅಂತಹ ಶಿಕ್ಷಕರನ್ನು ಗುರುತಿಸಿ ಸೂಕ್ತ ಗೌರವ ತೋರಿಸುವುದು ಸಮಾಜದ ಹೊಣೆ ಹಾಗೂ ಶಿಕ್ಷಕರು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. 

ಇದೇ ಸಂದರ್ಭದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಮಾಜಿ ನಿರ್ದೇಶಕ ಪ್ರೊ. ಜೆ. ಫಿಲಿಪ್‌ ಅವರಿಗೆ ‘ಸಾರ್ಥಕ ಜೀವನ’ ಪ್ರಶಸ್ತಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮಾಜಿ ಅಧ್ಯಕ್ಷ  ಸಿ. ವಳ್ಳಿಯಪ್ಪ ಅವರಿಗೆ ‘ಉದ್ಯಮ ಆಚಾರ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next