Advertisement

ಸಂಸತ್‌ ಟಿ.ವಿ ಲೋಕಾರ್ಪಣೆ ಸನ್ನಿಹಿತ

10:51 AM Jun 25, 2020 | mahesh |

ಹೊಸದಿಲ್ಲಿ: ಸಂಸತ್‌ ಅಧಿವೇಶನಗಳ ನೇರ ಪ್ರಸಾರಕ್ಕೆ ಮೀಸಲಿರುವ ರಾಜ್ಯಸಭಾ ಟಿ.ವಿ ಮತ್ತು ಲೋಕ ಸಭಾ ಟಿ.ವಿ.ಗಳನ್ನು ವಿಲೀನಗೊಳಿಸಿ “ಸಂಸತ್‌ ಟಿ.ವಿ’ ವಾಹಿನಿಯನ್ನು ಪರಿಚಯಿಸುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ವಿಲೀನ ಸಂಬಂಧ ರಚಿಸಿದ್ದ ಸಮಿತಿ ಶುಕ್ರವಾರ ತನ್ನ ವರದಿ ಸಲ್ಲಿಸಿದ್ದು, ಅಂದುಕೊಂಡಂತೆ ಎಲ್ಲ ಸಿದ್ಧತೆಗಳು ನಿಗದಿತ ಸಮಯದಲ್ಲಾದರೆ ಈ ವರ್ಷಾಂತ್ಯದೊಳಗೆ ಹೊಸ ಟಿವಿ ಚಾನೆಲ್‌ ಕಾರ್ಯಾರಂಭ ಮಾಡಲಿದೆ. ಲೋಕಸಭಾ ಟಿ.ವಿ 2006ರಲ್ಲಿ ಹಾಗೂ ರಾಜ್ಯಸಭಾ ಟಿ.ವಿ 2011ರಲ್ಲಿ ಬಿಡುಗಡೆಯಾಗಿದ್ದು, ಆಗಿನಿಂದಲೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಇದೀಗ ವಾಹಿನಿಗಳು ವಿಲೀನಗೊಳ್ಳಲಿದ್ದು, ಎರಡೂ ವಾಹಿನಿಗಳ ಸಿಬ್ಬಂದಿ ಇನ್ನು ಮುಂದೆ ಸಂಸದ್‌ ಟಿ.ವಿಗೆ ಕಾರ್ಯ ನಿರ್ವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next