Advertisement

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

01:53 AM Jan 10, 2025 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇ ಬೇಕು ಎಂಬ ಗುರಿಯೊಂದಿಗೆ ಕಾಂಗ್ರೆಸ್‌ ನೇತೃತ್ವ ದಲ್ಲಿ ಒಂದಾಗಿದ್ದ ವಿಪಕ್ಷಗಳ “ಐಎನ್‌ಡಿಐಎ ಕೂಟ’ವು ದಿಲ್ಲಿ ವಿಧಾನಸಭೆ ಚುನಾವಣೆ ವೇಳೆಗೆ ಬಹುತೇಕ ಸಮಾಪ್ತಿಯಾದಂತಾಗಿದೆ!

Advertisement

ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕೂಟದ ಆಮ್‌ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್‌ ಪ್ರತ್ಯೇಕ ಸ್ಪರ್ಧೆಗೆ ಇಳಿದ ಬೆನ್ನಲ್ಲೇ ಆಪ್‌ಗೆ ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಉದ್ಧವ್‌ ನೇತೃತ್ವದ ಶಿವಸೇನೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ ಏಕಾಂಗಿಯಾಗಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌, ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಲೋಕಸಭೆ ಚುನಾವಣೆ ಬಳಿಕ ಒಕ್ಕೂಟ ಖತಂ ಆಗಿರುವುದನ್ನು ಖಚಿತಪಡಿಸುವಂತೆ ಮಾತನಾಡಿದ್ದಾರೆ.

ತೇಜಸ್ವಿ ಯಾದವ್‌ ಹೇಳಿದ್ದೇನು?
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಐಎನ್‌ಡಿಐಎಯ ಮುಖ್ಯ ಧ್ಯೇಯವಾಗಿತ್ತು. ದಿಲ್ಲಿಯಲ್ಲಿ ಕಾಂಗ್ರೆಸ್‌ ಮತ್ತು ಆಪ್‌ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿರುವುದು ಅಸಹಜವಲ್ಲ ಎಂದಿದ್ದಾರೆ.

ಕೂಟ ವಿಸರ್ಜಿಸಿ: ಕಾಶ್ಮೀರ ಸಿಎಂ
ಒಂದು ವೇಳೆ ಈ ಕೂಟವು ಲೋಕಸಭೆಗೆ ಮಾತ್ರವೇ ಆಗಿರುವುದಾದರೆ, ಅದನ್ನು ಕೂಡಲೇ ವಿಸರ್ಜಿಸಿ ಸಮಾಪ್ತಿಗೊಳಿಸಬೇಕು. ನಾವು ಪ್ರತ್ಯೇಕವಾಗಿ ಕೆಲಸ ಮಾಡಬೇಕು ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಪವನ್‌ ಖೇರಾ ಏನು ಹೇಳಿದರು?
ವಿಧಾನಸಭೆ ಚುನಾವಣೆಗಳಲ್ಲಿ ಕೂಟದ ಪಕ್ಷಗಳು ಜಂಟಿಯಾಗಿ ಅಥವಾ ಏಕಾಂಗಿಯಾಗಿ ಸ್ಪರ್ಧಿಸಬೇಕೇ ಅಥವಾ ಏಕಾಂಗಿಯಾಗಿ ಸ್ಪರ್ಧಿಸಬೇಕೇ ಎಂಬ ಬಗ್ಗೆ ತಮ್ಮಲ್ಲಿಯೇ ನಿರ್ಧರಿಸಿಕೊಳ್ಳುತ್ತವೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ.

Advertisement

ಬಿಜೆಪಿ ಹೇಳಿದ್ದೇನು?
ಅಂತಾರಾಷ್ಟ್ರೀಯ ಹಗರಣ ಭಾಗಿಗಳು, ರಾಷ್ಟ್ರೀಯ ಹಗರಣಕೋರರು, ಇನ್ನೂ ಏನೆಲ್ಲ ಆರೋಪಗಳನ್ನು ಹೊತ್ತಿರುವವರು ಲೋಕಸಭೆ ಚುನಾವಣೆ ವೇಳೆಗೆ ಮೋದಿಯಂಥ ಪ್ರಾಮಾಣಿಕ ವ್ಯಕ್ತಿ ವಿರುದ್ಧ ಒಂದಾಗಿದ್ದರು ಎಂದು ಬಿಜೆಪಿಯ ಅರವಿಂದ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next