Advertisement

ಬೀದಿ ಬದಿ ವ್ಯಾಪಾರಿಗಳ ಜೀವನ ಮತ್ತಷ್ಟು ದುಸ್ತರ

01:26 PM Apr 23, 2021 | Team Udayavani |

ಬೆಂಗಳೂರು: ಕಳೆದ ಒಂದು ವರ್ಷದಿಂದಬೆಂಬಿಡದೆ ಕಾಡಿದ ಕೊರೊನಾ, ಮತ್ತೆ ತನ್ನ ಆರ್ಭಟಮುಂದುವರಿಸಿದೆ. ಹೀಗಾಗಿ, ಚೇತರಿಕೆ ಹಂತದಲ್ಲಿದ್ದಬೀದಿ ಬದಿ ವ್ಯಾಪಾರಿಗಳ ಜೀವನವನ್ನು ಕೊರೊನಾ ಮತ್ತೆ ಸಂಕಷ್ಟಕ್ಕೆ ದೂಡುತ್ತಿದೆ!ಹೌದು, ರಾಜಧಾನಿಯ ಬಹುತೇಕ ಬಸ್‌ನಿಲ್ದಾಣ, ಮಾರುಕಟ್ಟೆ, ಪ್ರಮುಖ ರಸ್ತೆ, ಶಾಲಾ-ಕಾಲೇಜು, ಚಿತ್ರಮಂದಿರ, ಮಾಲ್‌ಗ‌ಳ ಬಳಿ ನಿತ್ಯಸಂಜೆಯಾದರೆ ಸಾಕು ಬೀದಿ ಬದಿ ವ್ಯಾಪಾರಿಗಳು,ಆಹಾರ ಪ್ರಿಯರಿಗೆ ತಿಂಡಿ-ತಿನಿಸು, ಮಿರ್ಚಿ-ಬಜ್ಜಿ,ಎಗ್‌ರೈಸ್‌, ಪಾನಿಪುರಿ, ಇಡ್ಲಿ-ವಡಾ, ಗೋಬಿಮಂಜೂರಿ, ನೂಡಲ್ಸ್‌ ಸೇರದಂತೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಿದ್ದರು.

Advertisement

ಆದರೆ, ಕೊರೊನಾ ಎರಡನೇ ಅಲೆ ವ್ಯಾಪಕವಾಗಿಹರಡುತ್ತಿದ್ದು, ಸರಕಾರ ವೀಕೆಂಡ್‌ ಲಾಕ್‌ಡೌನ್‌ಹಾಗೂ ರಾತ್ರಿ ಕರ್ಫ್ಯೂ ಮುಂದುವರಿಸಿದೆ. ಇದರಿಂದ ಉದ್ಯಾನ ನಗರಿಯ ಪ್ರಮುಖ ರಸ್ತೆಗಳಾದಮಲ್ಲೇಶ್ವರ, ಅವೆನ್ಯೂ ರಸ್ತೆ, ಮೆಜೆಸ್ಟಿಕ್‌, ಶಿವಾಜಿನಗರ, ಜಯನಗರ, ಮೈಸೂರು ಬ್ಯಾಂಕ್‌ ವೃತ್ತಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕೆಲವು ಬೀದಿ ಬದಿಆಹಾರ ಮಳಿಗೆಗಳು ಮಾತ್ರ ಕಾಣಸಿಗುತ್ತಿವೆ.”ನಗರದ ಬೀದಿ ಬದಿಯ ವ್ಯಾಪಾರಿಗಳಿಗೆಕೊರೊನಾ ಎರಡನೇ ಅಲೆ ಅಕ್ಷರಶಃ ಕಾರ್ಮೋಡದಂತೆ ಆವರಿಸುತ್ತಿದೆ.

ಕಳೆದ ಮಾರ್ಚ್‌ ಕೊನೆ (25ದಿನಗಳಿಂದ) ವಾರದಿಂದ ನಿರೀಕ್ಷಿತ ವ್ಯಾಪಾರವಹಿವಾಟು ಇಲ್ಲದೇ ಬೀದಿ ಬದಿ ವ್ಯಾಪಾರಿಗಳಜೀವನ ದುಸ್ತರ ಎನ್ನುವಂತಾಗಿದೆ. ವರ್ಷವಿಡೀಬೀದಿ ಬದಿ ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿದ್ದ ರಾಜಧಾನಿಯ ಬಹುತೇಕ ವ್ಯಾಪಾರಿಗಳಿಗೆಕೊರೊನಾ ಎರಡನೇ ಅಲೆ ಘಾಸಿಗೊಳಿಸಿದೆ’ ಎಂದುಬೀದಿ ಬದಿ ಪಾನಿಪುರಿ ವ್ಯಾಪಾರಿ ರಮೇಶ್‌ವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.

ಮೂರು ಹೊತ್ತಿನ ಊಟಕ್ಕೂ ಕಲ್ಲು: “ನಿತ್ಯ ಸಂಜೆ 4ರಿಂದ 10 ಗಂಟೆಯ ವರೆಗೆ ವ್ಯಾಪಾರ ಮಾಡುತ್ತಿದ್ದಬೀದಿ ಬದಿಯ ವ್ಯಾಪಾರಿಗಳು, ಕನಿಷ್ಠ 2 ರಿಂದ 3ಸಾವಿರ ರೂ. ವಹಿವಾಟು ನಡೆಸುತ್ತಿದ್ದರು.ಅದರಿಂದ ಬರುವ ಹಣದಲ್ಲಿ(ಲಾಭ) ತಮ್ಮಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇದೀಗಬಹುತೇಕ ಯುವಕರು ಮಾಡಲು ಕೆಲಸವಿಲ್ಲದೇ,ಮೂರು ಹೊತ್ತಿನ ಊಟವಿಲ್ಲದೇ, ನಿರುದ್ಯೋಗಿಗಳಾಗಿ ಮನೆಯಲ್ಲಿಯೇ ಕಾಲ ಕಳೆಯುವಂತಹಪರಿಸ್ಥಿತಿ ಎದುರಾಗಿದೆ ಎಂದುಪೀಣ್ಯ ದ ಗೋಬಿ ಮಂಜೂರಿವ್ಯಾಪಾರಿ ಯೋಗೀಶ್‌ ತಮ್ಮ ಅಳಲು ತೋಡಿಕೊಂಡರು.

ದಿನಗೂಲಿ ನೌಕರರ ಪರದಾಟ: ನಗರದ ಆಟೋಚಾಲಕರು, ಕೂಲಿ ಕಾರ್ಮಿಕರು, ಸಣ್ಣ ಅಂಗಡಿವ್ಯಾಪಾರಿಗಳು, ಸೇಲ್ಸ್‌ಮನ್‌ಗಳು, ಗಾರ್ಮೆಂಟ್ಸ್‌ನೌಕರರು ಸೇರಿದಂತೆ ಇನ್ನಿತರ ದಿನಗೂಲಿಕಾರ್ಮಿಕರು ನಿತ್ಯ ಮಧ್ಯಾಹ್ನ, ರಾತ್ರಿಯಊಟವನ್ನು ಬೀದಿ ಬದಿಯ ಆಹಾರಮಳಿಗೆಯಲ್ಲಿಯೇ ಮಾಡುತ್ತಿದ್ದರು.

Advertisement

ಇಲ್ಲಿ ಕಡಿಮೆಹಣಕ್ಕೆ ಆಹಾರ ಸಿಗುತ್ತದೆ ಎಂದು ಎಲ್ಲರೂ ಇಲ್ಲಿಗೆಬರುತ್ತಿದ್ದರು. ಆದರೆ, ಕೊರೊನಾ ವ್ಯಾಪಕತೆಯಿಂದಬೀದಿ ಬದಿ ಆಹಾರ ಸಿಗದೆ, ಹೆಚ್ಚು ಹಣ ನೀಡಿದೊಡ್ಡ ಹೊಟೇಲ್‌ಗ‌ಳಿಗೆ ಹೋಗಲು ಸಾಧ್ಯವಾಗದೇಹಸಿವಿನಿಂದ ಬಳಲುವಂತಾಗಿದೆ ಎಂದುನೆಲಗದರನಹಳ್ಳಿಯ ತಳ್ಳುಗಾಡಿ ವ್ಯಾಪಾರಿ ಶಿವಣ್ಣಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next