Advertisement

ಎನ್‌ಇಪಿ ಜಾರಿಯಿಂದ ಸಮಸ್ಯೆ: ವಿಶ್ರಾಂತ ಕುಲಪತಿಗಳ ವೇದಿಕೆ ಆರೋಪ

10:51 PM Oct 29, 2022 | Team Udayavani |

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ದೇಶದಲ್ಲೇ ಮೊದಲ ರಾಜ್ಯವಾಗಿ “ರಾಷ್ಟ್ರೀಯ ಶಿಕ್ಷಣ ನೀತಿ-2020′ ಅನ್ನು ತರಾತುರಿ ಯಲ್ಲಿ ಜಾರಿಗೊಳಿಸಿದ ಪರಿಣಾಮ ವಿದ್ಯಾರ್ಥಿಗಳ ನೋಂದಣಿ, ಕೋರ್ಸ್‌ಗಳ ಆಯ್ಕೆ, ಎನ್‌ಇಪಿ ಬಗ್ಗೆ ಉಪನ್ಯಾಸಕರಿಗೆ ಅಗತ್ಯ ಜ್ಞಾನವಿಲ್ಲದೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಗಂಭೀರ ಆರೋಪ ಮಾಡಿದೆ.

Advertisement

ಈ ಸಂಬಂಧ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಡಾ| ಕೆ.ಎಸ್‌.ರಂಗಪ್ಪ, ಪ್ರಖರವಾಗಿ ಎನ್‌ಇಪಿ ಅನುಷ್ಠಾನಗೊಳಿಸಲು ಬಹುಮುಖ್ಯವಾಗಿ ಪ್ರಾಧ್ಯಾಪಕರಿಗೆ ತರಬೇತಿ ನೀಡಬೇಕಿದೆ. ಆದರೆ ಸಾಂಕೇತಿಕವಾಗಿ ತರಬೇತಿ ನೀಡಿರುವುದರಿಂದ ಪ್ರಾಧ್ಯಾಪಕರಿಗೆ ಪೂರ್ಣ ಪ್ರಮಾಣದಲ್ಲಿ ಎನ್‌ಇಪಿ ಅರ್ಥವಾಗದ ಪರಿಣಾಮ ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದರು.

ಪದವಿ ಕಾಲೇಜುಗಳಲ್ಲಿ ಬಹುತೇಕ ಅತಿಥಿ ಉಪನ್ಯಾಸಕರೇ ಇರುವುದರಿಂದ ಅವರಿಗೆ ಎನ್‌ಇಪಿ ಬಗ್ಗೆ ತರಬೇತಿ ನೀಡಬೇಕಿದೆ. ತರಬೇತಿ ನೀಡಲು ವಿಶ್ರಾಂತ ಕುಲಪತಿಗಳ ವೇದಿಕೆ ಸಿದ್ಧವಿದೆ. ಆರಂಭಿಕ ಹಂತವಾಗಿ ಮೈಸೂರು ವಿಶ್ವವಿದ್ಯಾನಿಲಯದ 12 ಕಾಲೇಜುಗಳಲ್ಲಿ ತರಬೇತಿ ನೀಡಿದ್ದೇವೆ. ಕರಾವಳಿ, ಕಲಬುರಗಿ ಮತ್ತು ಧಾರವಾಡ ವಿಭಾಗಗಳಲ್ಲಿಯೂ ತರಬೇತಿ ನೀಡ‌ಬೇಕಿದೆ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next