ಕಮಲನಗರ: ಕೊತ್ತಂಬರಿ ಸೊಪ್ಪಿನ ಬೆಲೆ ಸಂಪೂರ್ಣ ನೆಲಕಚ್ಚಿದ್ದು, ಜೀವನಾಧಾರಕ್ಕಾಗಿಎಕರೆ ಭೂಮಿಯಲ್ಲಿ ಕೊತ್ತಂಬರಿ ಬೆಳೆದುಜೀವನ ಸಾಗಿಸುತ್ತಿದ್ದ ರೈತನ ಬದುಕುಹೈರಾಣಾಗಿದೆ.ತಾಲೂಕಿನ ಡೋಣಗಾಂವ(ಎಂ)ಗ್ರಾಮದ ಸೋಮು ಮಲ್ಲಿಕಾರ್ಜುನಗಂದಗೆ ಎಂಬುವರೇ ಕೊತ್ತಂಬರಿ ಸೊಪ್ಪುಬೆಳೆದು ಕೈಸುಟ್ಟಿಕೊಂಡಿರುವ ರೈತ.
ತನ್ನ 1ಎಕರೆ ಭೂಮಿಯಲ್ಲಿ ಪ್ರತಿ ವರ್ಷ ಬೇಸಿಗೆಕಾಲದಲ್ಲಿ ಕೊತ್ತಂಬರಿ ಸೊಪ್ಪು ಬಿತ್ತನೆ ಮಾಡಿಲಾಭ ಪಡೆಯುತ್ತಿದ್ದರು. ಆದರೆ, ಈ ವರ್ಷಬೆಲೆ ಕುಸಿತದಿಂದಾಗಿ ಉತ್ತಮ ಬೆಲೆ ಸಿಗದೆಕಂಗಾಲಾಗಿದ್ದಾರೆ.ಮಹಾರಾಷ್ಟ್ರದ ಚಾಕೂರ ಪಟ್ಟಣದಕೃಷ್ಣಾಯಿ ನರ್ಸರಿಯಿಂದ ಕೆ.ಜಿಗೆ 100 ರೂ.ನಂತೆ 30 ಕೆ.ಜಿ ಕಾಸ್ತಿ ತಳಿಯ ಕೊತ್ತಂಬರಿಬೀಜವನ್ನು ತಂದು ಬಿತ್ತನೆ ಮಾಡಿದ್ದರು.
ಸಮಯಕ್ಕೆ ನೀರು, ಔಷಧ ಸಿಂಪರಣೆಮಾಡಿ 40 ದಿನಗಳ ಕಾಲ ಕಾಳಜಿಯಿಂದನೋಡಿಕೊಂಡಿದ್ದರು. ಕೊತ್ತಂಬರಿ ಸೋಪ್ಪುಚೆನ್ನಾಗಿ ಬಂದಿತು. ಆದರೆ, ದರ ಕುಸಿತರೈತನನ್ನು ಆರ್ಥಿಕ ನಷ್ಟಕ್ಕೆ ಒಳಗಾಗಿಸಿದೆ.ಪ್ರತಿ ವರ್ಷ ಬೇಸಿಗೆಯಲ್ಲಿ ಕೊತ್ತಂಬರಿಸೊಪ್ಪು ಬೆಳೆಯುತ್ತಿದ್ದೇನೆ. ಕಳೆದ ವರ್ಷಉತ್ತಮ ಫಸಲು ಸಿಕ್ಕಿತ್ತು. ಒಂದಿಷ್ಟುಲಾಭವೂ ಆಗಿತ್ತು. ಈ ಬಾರಿಯೂಕೂಡಾ ಉತ್ತಮ ಬೆಳೆ ಬಂದಿತ್ತು ಲಾಭಸಿಗಬಹುದು ಎಂದುಕೊಂಡಿದ್ದರು.
ಆದರೆ,ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ.ಕೊತ್ತಂಬರಿ ಸೊಪ್ಪು ಕಟಾವು ನಡೆದಿದ್ದು,ಎಕರೆಯಲ್ಲಿ ಅಂದಾಜು 140 ಕ್ಯಾರೇಟ್‌ಬರುವ ನಿರೀಕ್ಷೆ ಇದೆ. 1 ಕ್ಯಾರೇಟ್‌ನಲ್ಲಿ32 ಕಟ್ಟು ಸೊಪ್ಪಿನ ಸೂಡುಗಳಿರಲಿದ್ದು,ಪ್ರತಿ ಕ್ಯಾರೇಟ್‌ಗೆ 110 ರೂ. ನಂತೆಮಹಾರಾಷ್ಟ್ರದ ಚಾಕೂರನ ಗ್ರಾಹಕರೊಬ್ಬರುಹೊಲಕ್ಕೆ ಬಂದು ಖರೀದಿ ಮಾಡಿಕೊಂಡುಹೋಗುತ್ತಿದ್ದಾರೆ ಎಂದು ಹೇಳುತ್ತಾರೆ ರೈತಸೋಮು.
ಕಳೆದ ವರ್ಷ ಪ್ರತಿ ಕ್ಯಾರೇಟ್‌ಗೆ 250 ರಿಂದ 300 ರೂ.ನಂತೆಕೊತ್ತಂಬರಿ ಸೊಪ್ಪು ಮಾರಾಟಮಾಡಿದ್ದೇನೆ. ಈ ವರ್ಷವೂ ಕೂಡಾಕಳೆದ ವರ್ಷಕ್ಕಿಂತ ಹೆಚ್ಚಿನ ಆದಾಯಬರಬಹುದು ಎಂಬ ನಿರೀಕ್ಷೆಇತ್ತು. ಆದರೆ ಬೆಲೆ ಕುಸಿತದಿಂದನಿರಾಶೆಯಾಗಿದೆ.
ಸೋಮು ಮಲ್ಲಿಕಾರ್ಜುನಗಂದಗೆ, ರೈತ
ಮಹಾದೇವ ಬಿರಾದಾರ