Advertisement

ರಾಜ್ಯ ಬಿಜೆಪಿ ಸರಕಾರದಿಂದ ಜನಪರ ಆಡಳಿತ: ಜೆ.ಪಿ. ನಡ್ಡಾ

12:06 AM Feb 22, 2023 | Team Udayavani |

ಬೇಲೂರು: ರಾಜ್ಯ ಬಿಜೆಪಿ ಸರಕಾರದ ಆಡಳಿತದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಪರ ಆಡಳಿತ ನಡೆಸಿದ್ದು ಹಿಂದಿನ ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

Advertisement

ಪಟ್ಟಣದ ಸರಕಾರಿ ಪ. ಪೂ. ಕಾಲೇಜು ಮೈದಾನದಲ್ಲಿ ನಡೆದ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಅವರು ಮಾತ
ನಾಡಿದರು.

1,800 ಕೋಟಿ ಅನುದಾನ
ಸಿಎಂ ಬೊಮ್ಮಾಯಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಸರಕಾರ ಸುಮಾರು 1,800 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರಕಾರಗಳು ಯಾವುದೇ ಅನುದಾನ ಬಿಡುಗಡೆ ಮಾಡುವಲ್ಲಿ ವಿಫ‌ಲವಾಗಿದ್ದವು ಎಂದು ತಿಳಿಸಿದರು. ಹಳೇಬೀಡಿ ಮಾದೀಹಳ್ಳಿ ಏತ ನೀರಾವರಿ ಹಾಗೂ ರಣಘಟ್ಟ ಯೋಜನೆಗಳಿಗೆ ಈಗಿನ ಸರಕಾರ 190 ಕೋಟಿ ರೂ.ಗಳ ಹಣ ಬಿಡುಗಡೆ ಮಾಡಿದೆ ಎಂದು ಸಿಎಂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next